ಡೈಲಿ ವಾರ್ತೆ: 28/April/2024

ಕೊಂಡಿಕೊಪ್ಪದಲ್ಲಿ ಅದ್ದೂರಿಯಾಗಿ ನಡೆದ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ

156ನೇ ಮತಕಟ್ಟೆ ಯಾದ ಸರಕಾರಿ ಕಿರಿಯ  ಪ್ರಾಥಮಿಕ ಶಾಲೆ ಕೊಂಡಿಕೊಪ್ಪದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆಯ ಎಂಬ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಧ್ವಜಾರೋಹಣವನ್ನು ಪಿಡಿಓ ಸವಿತಾ ಸೋಮಣ್ಣವರ ಪಂ ಅಭಿವೃದ್ಧಿ ಅಧಿಕಾರಿಗಳು ನಡೆಸಿಕೊಟ್ಟರು.


ಮತದಾರರ ಮಾಹಿತಿಯ ಪತ್ರ ಮತದಾರರಿಗೆ ವಿತರಿಸಿದ ಜೊತೆ ದಿನಾಂಕ 07-05-2024 ರಂದು ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ವಿನಂತಿಸಿ ಕೊಂಡರು. ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡೋಣ ಶೇಕಡಾ ನೂರರಷ್ಟು ಮತದಾನ ಆಗುವಂತೆ ಜಾಗೃತಿ ಮೂಡಿಸೋಣ ಎಂದರು.ಆನಂತರ ಮುಖ್ಯ ಶಿಕ್ಷಕರ ಎಂ ಎಸ್ ಹಿರೇಮಠ ಪ್ರತಿಜ್ಞಾವಿಧಿ ಬೋಧಿಸಿದರು.


ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಸ್ ಕೆ ಡಂಬಳ ಮತಗಟ್ಟೆ ಅಧಿಕಾರಿ ರತ್ನಾ ದೊಡ್ಡಮನಿ ಬಸವರಾಜ ದೊಡ್ಡಮನಿ ಗೂರಪ್ಪ ಲಮಾಣಿ ರಮೇಶ ದೊಡ್ಡಮನಿ ಸುರೇಶ ಲಮಾಣಿ ಕಾಶವ್ವ ದೊಡ್ಡಮನಿ ಗಂಗಾ ಲಮಾಣಿ ಹನುಮಂತ ವಾಲಿಕಾರ ಪತ್ರಕರ್ತ ಮಂಜು ರಾಠೋಡ ಮುಂತಾದವರು ಉಪಸ್ಥಿತರಿದ್ದರು.
ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮತದಾರರ ಜಾಗೃತಿ ಜಾಥಾ ನಡೆಯಿತು.