ಡೈಲಿ ವಾರ್ತೆ: 04 ನವಂಬರ್ 2022

ಸುಳ್ಯದಲ್ಲಿ 7ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು

ಸುಳ್ಯ: ಶಾಕಿಂಗ್ ಘಟನೆಯೊಂದರಲ್ಲಿ ಕರಾವಳಿಯ ಸುಳ್ಯದಲ್ಲಿ
7 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಕುಕ್ಕುಜಡ್ಕ ಸ.ಹಿ.ಪ್ರಾ.ಶಾಲೆಯ 2 ನೇ ತರಗತಿ ವಿದ್ಯಾರ್ಥಿ ಕುಂಟಿಕಾನದ ಮೋಕ್ಷಿತ್(7) ಮೃತ ಬಾಲಕ.
ಬಾಲಕನಿಗೆ ಶಾಲೆಯಲ್ಲಿ ಮಧ್ಯಾಹ್ನದ ವೇಳೆಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿದೆ.ಈ ಬಗ್ಗೆ ಶಿಕ್ಷಕರು ಪೋಷಕರಿಗೆ ಮಾಹಿತಿ‌ ನೀಡಿದ್ದಾರೆ.ಇದರಿಂದ ಮಗನಿಗೆ ಕರೆದುಕೊಂಡು‌ ಹೋಗಲು ಮೋಕ್ಷಿತ್ ತಂದೆ ಶಾಲೆಗೆ ಬಂದಿದ್ದಾರೆ. ಈ ವೇಳೆ ಮೋಕ್ಷಿತ್ ಕುಸಿದು ಬಿದ್ದಿದ್ದಾನೆ.

ತಕ್ಷಣ ಬಾಲಕನಿಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಪರೀಕ್ಷಿಸಿ ಬಾಲಕನಿಗೆ ಹೃದಯಾಘಾತವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.