ಡೈಲಿ ವಾರ್ತೆ: 11 ನವಂಬರ್ 2022

ಟೊಂಗಾ ಸಮುದ್ರದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪನ; ಸುನಾಮಿ ಭೀತಿ

ದಕ್ಷಿಣ ಪೆಸಿಫಿಕ್‌ನ ಟೊಂಗಾ ದೇಶದ ಸಮುದ್ರದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ.

ನಿಯುವಿನ ರಾಜಧಾನಿ ಅಲೋಫಿಯಿಂದ ಪಶ್ಚಿಮಕ್ಕೆ 241 ಕಿಲೋಮೀಟರ್ ದೂರದಲ್ಲಿ ಇದೀಗ ತೀವ್ರ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.5ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ.

ಭೂಕಂಪನದ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ದೃಢಪಡಿಸಿದೆ. ಟೊಂಗಾದಲ್ಲಿ ಭೂಕಂಪನ ಬೆನ್ನಲ್ಲೇ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗಿದೆ.

ಈ ಹಿನ್ನೆಲೆ ಅಪಾಯವನ್ನು ಎದುರಿಸುತ್ತಿರುವ ನಿವಾಸಿಗಳಿಗೆ ಕೆಲವು ಮುನ್ನೆಚ್ಚರಿಕೆ ಸಂದೇಶ ನೀಡಲಾಗಿದೆ.

ಸ್ಟೀಲ್ ಹಾಗೂ ಕಾಂಕ್ರೀಟ್ ಮನೆಗಳಲ್ಲಿ ವಾಸವಿರುವ ಜನರು ಮೂರನೇ ಮಹಡಿಗಳಿಗೆ ಸ್ಥಳಾಂತರವಾಗುವಂತೆ ಸಲಹೆ ನೀಡಲಾಗಿದೆ.

ಇದೇ ಜನವರಿಯಲ್ಲಿ, ಟೊಂಗಾದಲ್ಲಿ ಜ್ವಾಲಾಮುಖಿ ಸ್ಫೋಟವಾಗಿತ್ತು, ಅದರ ನಂತರ ಸುನಾಮಿಗೆ ನುಕು ಅಲೋಫಾ ನಗರದ ಒಂದು ಭಾಗ ಮುಳುಗಿ ಹೋಗಿತ್ತು.