ಡೈಲಿ ವಾರ್ತೆ: 29 ನವಂಬರ್ 2022

ಪತ್ರಕರ್ತ, ವರದಿಗಾರ, ಅಂಕಣಕಾರ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರಿಗೆ ಕನ್ನಡ ರಾಜ್ಯೋತ್ಸವದ “ಸಿರಿ ನೆಲ ಪ್ರಶಸ್ತಿ 2022” ಗೆ ಆಯ್ಕೆ

ಕುಮಟಾ : ಕುಮಟಾ ಕನ್ನಡ ಸಾಹಿತ್ಯ ಸಂಘ (ರಿ.) ಮತ್ತು ಜನಸಾಮಾನ್ಯ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ 2022 , ವಿಜಯಶಾಲಿ ಕನ್ನಡ ವಾರಪತ್ರಿಕೆ ಕುಮಟಾ ಇವುಗಳ ಸಂಯುಕ್ತ ಆಶ್ರಯದಲ್ಲಿ 67ನೇ ರಾಜ್ಯೋತ್ಸವದ ಆಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 67 ಸಾಧಕರಿಗೆ “ಸಿರಿ ನೆಲ” ಕನ್ನಡ ರಾಜ್ಯೋತ್ಸವ ಪುರಸ್ಕಾರ ಕಾರ್ಯಕ್ರಮವು ದಿನಾಂಕ 30 ರಂದು ಕುಮಟಾ ಜಿಲ್ಲೆಯ “ಪುರಭವನ”ದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆನಾವರಣಗೊಳ್ಳಲಿದೆ.

ಸಮ್ಮೇಳನ ಅಧ್ಯಕ್ಷರಾಗಿ ಡಾ .ಮಂಜುನಾಥ್ ಅಂಬಿಗ ಪ್ರಾಧ್ಯಾಪಕರು ಹೊನ್ನಾವರ ಹಾಗೂ ಸಂಸ್ಥಾಪಕ ಅಧ್ಯಕ್ಷರಾಗಿ ಸದಾನಂದ ದೇಶ ಬಂಡಾರಿ ಮತ್ತು ಪ್ರಧಾನ ಸಂಘಟಕಾಗಿ ಸುಬ್ರಾಯ ಪದಾಧಿಕಾರಿಗಳು ಸರ್ವ ಸದಸ್ಯರು ಕುಮಟಾ ಕನ್ನಡ ಸಂಘ ಕುಮಟಾ ಇವರ ಸಂಯೋಜನೆಯಲ್ಲಿ 67ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಜನ ನುಡಿ “ಕಾರ್ಯಕ್ರಮ ಅದ್ದೂರಿಯಾಗಿ ಅನಾವರಣಗೊಳ್ಳಲಿದೆ.

ಕುಮಟಾ ಕನ್ನಡ ಸಂಘ ವತಿಯಿಂದ ನೀಡಲ್ಪಡುವ 67ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಯುಕ್ತ ಆಶ್ರಯದಲ್ಲಿ ಮತ್ತು ರಾಜ್ಯೋತ್ಸವದ ಪ್ರಯುಕ್ತ ಪತ್ರಕರ್ತ, ವರದಿಗಾರ ಅಂಕಣಕಾರ ಹಾಗೂ ಮಾಧ್ಯಮ ವಿಶ್ಲೇಷಕರಾದ ಕೆ.ಸಂತೋಷ್ ಶೆಟ್ಟಿ ಕಾಜಾಡಿ ಮ ನೆ ಮೊಳಹಳ್ಳಿ ಇವರಿಗೆ ಈ ಬಾರಿ “ಸಿರಿ ನೆಲ ಪ್ರಶಸ್ತಿ 2022″ಗೆ ಆಯ್ಕೆ ಮಾಡಲಾಗಿದೆ. ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಇವರು ಹಲವಾರು ಪತ್ರಿಕೆಗಳಲ್ಲಿ ವಿಶೇಷ ಅಂಕಣಕಾರರಾಗಿ ಹಾಗೂ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯಲ್ಲಿ ಬೆಂಗಳೂರು ಮುಖ್ಯಸ್ಥರಾಗಿ, ಸುದ್ದಿ ಮನೆ ಕನ್ನಡ ವಾರಪತ್ರಿಕೆಯ ಭಾವ ದೀಪ್ತಿ , ಅಂಕಣಕಾರರಾಗಿ ಕಲ್ಯಾಣ ವೈಭವ ಕನ್ನಡ ದಿನಪತ್ರಿಕೆ ಉತ್ತರ ಕನ್ನಡದ ವಿಶೇಷ ವರದಿಗಾರರಾಗಿ ಮತ್ತು ಚಿಕ್ಕಬಳ್ಳಾಪುರದ ಆಶಾ ಧ್ವನಿ ಕನ್ನಡ ದಿನಪತ್ರಿಕೆ ಬೆಂಗಳೂರು ಉತ್ತರ ವರದಿಗಾರರಾಗಿ, ಹೊಸಪೇಟೆ ನಗರದ ಜಿ ಜರ್ನಿ ಆಫ್ ಸೊಸೈಟಿ ಪತ್ರಿಕೆಯ ಸಹಸಂಪಾದಕರಾಗಿ, ಡೈಲಿ ವಾರ್ತೆ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಖ್ಯಾತಿ ಇವರಿಗೆ ಇದೆ. ಅದಲ್ಲದೆ ಇತ್ತೀಚಿಗೆ ‘ಉತ್ತಮ ವರದಿಗಾರಿಕೆ ಪ್ರಶಸ್ತಿ 2015,’ ಧಾರವಾಡ ರಂಗಾಯಣ ಸಂಸ್ಥೆ ಮತ್ತು ವಿಶ್ವ ದರ್ಶನ ಮಾಧ್ಯಮ ಸಂಸ್ಥೆ ಕೂಡ ಮಾಡಿದ ‘ವಿಶ್ವ ಮಾಧ್ಯಮ ಭೂಷಣ ಪ್ರಶಸ್ತಿ 2022’,
ಮ್ಯಾಕ್ಸ್ ಲೈಫ್ ಕೂಡ ಮಾಡಿದ ‘ಸೇವಾ ರತ್ನ ಪ್ರಶಸ್ತಿ 2020’, ಉತ್ತಮ ವರದಿಗಾರಿಕೆ ಮಾಧ್ಯಮ ಭೂಷಣ ಪ್ರಶಸ್ತಿ -2022,
ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಶ್ರೀ ಮಾಥಾಪ್ರಕಾಶನ ಕಡಲ ಬಾಳು ವಿಜಯನಗರ ಕೊಡ ಮಾಡಿದ ‘ಸಾಧಕ ರತ್ನ ಪ್ರಶಸ್ತಿ -2022’ ಇತ್ತೀಚಿಗೆ ಲಭಿಸಿದೆ. ಈ ಬಾರಿ ಕೂಡ ಕುಮಟಾ ಕನ್ನಡ ಸಂಘ 67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಈ ಬಾರಿ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಲಿರುವರು ಶ್ರೀ ಕಾಲಜ್ಞಾನ ಬ್ರಹ್ಮಾ ಸದ್ಗುರು ಶಿವಯೋಗಿ ಶರಣಬಸವ ಮಹಾಸ್ವಾಮಿಗಳು ಸಂಸ್ಥಾನ ಕೋಡಿಮಠ, ಗಜೇಂದ್ರಗಡ ಗದಗ, ವಿಶೇಷ ಆಹ್ವಾನಿತರಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪ್ರಿಯಾಂಕಾ ಎಂ. ಹಾಗೂ ಕುಮಟ – ಹೊನ್ನಾವರ ಶಾಸಕರಾದ ದಿನಾಕರ್ ಕೆ. ಶೆಟ್ಟಿ ಹಾಗೂ ಕಾರವಾರ – ಅಂಕೋಲ ಶಾಸಕರಾದ ರೂಪಾಲಿ ನಾಯಕ ,ಹೊನ್ನಾವರ -ಭಟ್ಕಳ ಶಾಸಕರಾದ ಸುನಿಲ್ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ಳುವೆ ಕಾರ್, ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಹೀಗೆ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ವಿಶೇಷ ಸಾಧಕರನ್ನು ವೇದಿಕೆಯಲ್ಲಿ ಗುರುತಿಸಲಾಗುತ್ತದೆ. ವಿವಿಧ ವಿಭಾಗಗಳಲ್ಲಿ ಐಕ್ಯ ಪ್ರಕ್ರಿಯೆ ನಡೆದಿದ್ದು 67ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 67 ಸಾಧಕರಿಗೆ ಭವ್ಯವೇದಿಕೆಯಲ್ಲಿ “ಸಿರಿ ನೆಲ”ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕುಮಟ ಕನ್ನಡ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.