ಡೈಲಿ ವಾರ್ತೆ: 29 ನವಂಬರ್ 2022

ಕುಂದಾಪುರ: ಇಂದು ನಮ್ಮ ನಾಡ ಒಕ್ಕೂಟ(ರಿ ) ಪ್ರಥಮ ಸೇವಾ ಕಚೇರಿ ಉದ್ಘಾಟನೆ.

ಕುಂದಾಪುರ: ನಮ್ಮ ನಾಡ ಒಕ್ಕೂಟ (ರಿ ) ಕಳೆದ ಎರಡು ವರ್ಷ ಗಳಿಂದ ಸಮುದಾಯದ ಸಬಲೀಕರಣ, ಐಕ್ಯತೆ, ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಅನುಕೂಲಕರ ಮಾಹಿತಿ ಶಿಬಿರ ಕಾರ್ಯಕ್ರಮಗಳನ್ನು, ಕೇಂದ್ರ ಸಮಿತಿಯ ಮತ್ತು ಜಿಲ್ಲಾ ಸಮಿತಿಯ ಇವರುಗಳ ಮಾರ್ಗದರ್ಶನದೊಂದಿಗೆ, ಆಯಾ-ಆಯಾ ತಾಲೂಕು ಘಟಕಗಳಲ್ಲಿ,
ಹಮ್ಮಿಕೊಳ್ಳುತ್ತಾ ಬಂದಿರುತ್ತದೆ.


ಕೇಂದ್ರ ಸಮಿತಿಯ ಅಧ್ಯಕ್ಷರಾದ ಮುಹಮ್ಮದ್ ಸಲೀಮ್ ಇವರ ಸತತ ಪ್ರಯತ್ನದಿಂದ,ಉಪಾಧ್ಯಕ್ಷ ರಾದ ಡಾ ರಿಜ್ವಾನ್ ಫಜ್ಲು ಕುಂದಾಪುರ ಇವರ ಮಾರ್ಗದರ್ಶನ ದಿಂದ ಟ್ರಸ್ಟಿನ ಸದ್ಯಸ್ಯರ ಹಾಗು ಕೇಂದ್ರ ಸಮಿತಿಯ ಸಹಕಾರ ದೊಂದಿಗೆ
ಮೂಡಬಿದ್ರೆ, ಕಾರ್ಕಳದಲ್ಲಿ ಕೆಲವೊಂದು ಅನುಕೂಲಕರ ಕಾರ್ಯಕ್ರಮ ನಡೆದು, ತದನಂತರ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಮುಸ್ತಾಕ್ ಅಹ್ಮದ್ ಬೆಳ್ವೆ, ಪ್ರದಾನ ಕಾರ್ಯದರ್ಶಿ ಮೌ. ಝಮೀರ್ ಅಹ್ಮದ್ ರಷಾದಿ, ಹೆಬ್ರಿ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್ ಅಜೆಕಾರು, ಕುಂದಾಪುರ ಘಟಕದ ಅಧ್ಯಕ್ಷ ಹುಸೇನ್ ಹೈಕಾಡಿ, ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಇವರುಗಳ ನಾಯಕತ್ವದಲ್ಲಿ ಎಡೆಬಿಡದೆ ಆಯುಷ್ಮಾನ್ ಕಾರ್ಡ್ ಶಿಬಿರ, ಉದ್ಯೋಗ ಮಾಹಿತಿ ಶಿಬಿರ, ಇಶ್ರಮ್ ಕಾರ್ಡ್ ಶಿಬಿರ,ಸ್ಕಾಲರ್ಶಿಪ್ ಶಿಬಿರ,ಸಾಧಕ ವಿದ್ಯಾರ್ಥಿಗಳಿಗೆ,ಇತರ ಸೇವಾ ರಂಗದಲ್ಲಿನ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ಬಗ್ಗೆ ಪ್ರೇರಣಾ ಶಿಬಿರ, ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಪಡೆಯಲು ಸಹಕಾರ, ಸಮಾಜದ ಎಲ್ಲರನ್ನು ಒಟ್ಟುಗೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಅಬ್ದುಲ್ ರಜಾಕ್, ನೌಜಲ್ ಮುಲ್ಕಿ, ಹಮ್ಜತ್ ಹೆಜಮಾಡಿ ಅವರುಗಳ ನೇತೃತ್ವದಲ್ಲಿ ನಿಸ್ವಾರ್ಥವಾಗಿ ನೀಡುವ ಸರಕಾರಿ ಉದ್ಯೋಗ ಮಾಹಿತಿ ಶಿಬಿರಗಳು ಎಲ್ಲಾ ವಿದ್ಯಾರ್ಥಿಗಳ, ಪೋಷಕರ , ಹಿರಿಯರ ಮೆಚ್ಚುಗೆಗೆ ಪಾತ್ರವಾಗಿವೆ.

ಉಡುಪಿ ಜಿಲ್ಲೆಯಲ್ಲಿನ ತಾಲೂಕುಗಳಾದ ಕಾರ್ಕಳ ಘಟಕದ ಅಧ್ಯಕ್ಷರಾಗಿ ಶಾಕಿರ್ ಶಿಷಾ, ಉಡುಪಿ ತಾಲೂಕು ಅಧ್ಯಕ್ಷರಾಗಿ ನಜೀರ್ ನೆಜಾರ್, ಬ್ರಹ್ಮಾವರ ಘಟಕದ ಅಧ್ಯಕ್ಷರಾಗಿ ಶಾಕಿರ್ ಹಾವಂಜೆ ನಂತರ ಶೌಕತ್ ಆಲಿ ಬಾರ್ಕೂರ್, ಕುಂದಾಪುರ ಘಟಕದ ಅಧ್ಯಕ್ಷರಾಗಿ ದಸ್ತಗೀರ್ ಕಂಡ್ಲೂರ್ , ಕಾಪು ಘಟಕದ ಅಧ್ಯಕ್ಷರಾಗಿ ಅಶ್ರಫ್ ಪಡುಬಿದ್ರೆ ಆಯ್ಕೆಯಾಗಿ,ಇವರುಗಳ ಅದ್ಯಕ್ಷತೆಯಲ್ಲಿ ಸೇವಾ ಕಾರ್ಯಗಳು ನಡೆಯುತ್ತಾ ಬರುತ್ತಿವೆ.

ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಅಬುಮೊಹಮ್ಮದ್ ಕುಂದಾಪುರ, ಇರ್ಷಾದ್ ನೆಜಾರ್, ನಜೀರ್ ಶಾ ಅಜೆಕಾರು,ಸಿ.ಕೆ ಅನ್ವರ್ ಹಾಲಾಡಿ, ಶಾಕಿರ್ ಹಾವಂಜೆ ಇವರುಗಳ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ ಎಲ್ಲಾ ಘಟಕಗಳು ಅನುಕೂಲಕರ ಕಾರ್ಯಕ್ರಮ ಮಾಡುದರ ಮೂಲಕ NNO ದೇಶ ವಿದೇಶ ಗಳಲ್ಲಿ ಮನೆಮಾತಾಗಿದೆ.

ತನ್ನ ಕಾರ್ಯ ವೈಖರಿಯಿಂದ ಸಂಚಲನ ಮೂಡಿಸಿದ
ಕುಂದಾಪುರ ಘಟಕದ ಅಧ್ಯಕ್ಷರಾಗಿದ್ದ ಹುಸೇನ್ ಹೈಕಾಡಿ,
NNO ನಲ್ಲೀ ಘಟಕದ ಅಧ್ಯಕ್ಷ ಸ್ಥಾನ ದಿಂದ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹುದ್ದೆಗೆ ಭರ್ತಿ ಪಡೆದ ನಂತರ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಮುಖವಾಗಿ ಕುಂದಾಪುರದಿಂದ ಸುಳ್ಯದ ಕಡೆಗೆ, ಕುಂದಾಪುರದಿಂದ ಕಾರವಾರದ ಕಡೆಗೆ ಅಭಿಯಾನದ ಮೂಲಕ ಕೇಂದ್ರ ಜಿಲ್ಲಾ ಹಾಗೂ ತಾಲೂಕು ಸಮಿತಿಯ ಸದಸ್ಯರೊಂದಿಗೆ ಇತರ ತಾಲೂಕಿಗೆ ಭೇಟಿ ಮಾಡಿ ಘಟಕಗಳನ್ನು ಪ್ರಾರಂಬಿಸಿದರು.

ಇದರಿಂದ ಇತರ ಜಿಲ್ಲೆಯಲ್ಲಿನ ಸಮುದಾಯದ ಜಮಾತಿನ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಸಹಕಾರ ಆಯಿತು.
NNO ಸ್ವಂತ ಕಚೇರಿ ಆಗಬೇಕೆಂದು ಕೇಂದ್ರ ಸಮಿತಿ ಸೂಚನೆ ಮೇರೆಗೆ, ಇಂದು ಕಚೇರಿ ಮಾಡಲು ಶ್ರಮ ಪಟ್ಟು ದಾನಿಗಳ ಮೂಲಕ ಹೊಸ ಸೇವಾ ಕಚೇರಿ ಉದ್ಘಾಟನೆಗೊಳ್ಳುತ್ತಿರುವುದು, ನಮಗೆಲ್ಲ ಹೆಮ್ಮೆಯ ವಿಷಯ.

ಸಂಘಟನ ಕಾರ್ಯದರ್ಶಿಯಾಗಿ ಮುಂದೆ ಕೇಂದ್ರ ಜಿಲ್ಲಾ ತಾಲೂಕು ಘಟಕ ಗಳ ಸಹಕಾರದೊಂದಿಗೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಕಚೇರಿಗಳು, ಘಟಕಗಳು ಹಾಗೂ ಇಂತಹ ಸಮಾಜಮುಖಿ ಕಾರ್ಯಕ್ರಮ ನಡೆಯಲಿ ಎನ್ನುವ ಹಾರೈಕೆಯೊಂದಿಗೆ.
ಇಂದು ನಡೆಯುವ ಕಚೇರಿ ಉದ್ಘಾಟನ ಕಾರ್ಯಕ್ರಮವನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಕುಂದಾಪುರ ಹಿರಿಯ ವಕೀಲರಾದ ಶಿರಿಯರ ಗೋಪಾಲಕೃಷ್ಣ ಶೆಟ್ಟಿ , ಮಾಜಿ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಎಂಸಿಸಿ ಬ್ಯಾಂಕ್ ನಿರ್ದೇಶಕ ಕಿರಣ್ ಕ್ರಾಸ್ತಾ, ಉದ್ಯಮಿ ಸತೀಶ್ ಕಿಣಿ ಬೆಳ್ವೆ, ಜೆ ಸಿ ಐ ಕುಂದಾಪುರ ಸಿಟಿ ಪೂರ್ವಾಧ್ಯಕ್ಷ ರಾಘವೇಂದ್ರ ಚರಣ್ ಗೌಡ, ಉದ್ಯಮಿ ಚೆರಿಯಬ್ಬಾ ಸಾಹೇಬ್ ಗುಲ್ವಾಡಿ, ಪ್ಲೆಸೆಂಟ್ ಮಾಲೀಕ ಅಬ್ದುಲ್ ಬಶೀರ್ ಕೋಟ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದರೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.