ಡೈಲಿ ವಾರ್ತೆ: 29 ನವಂಬರ್ 2022

ಉಡುಪಿ: ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ತಡೆವೊಡ್ಡಲು ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಓಡಿಸಿದ ಗ್ರಾಮಸ್ಥರು

ಉಡುಪಿ: ಉದ್ಯಾವರ ಕುತ್ಪಾಡಿಯ ಮಾಂಗೋಡು ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಾಸ್ಥಾನದ **ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ** ಅವಕಾಶ ನೀಡಬಾರದು ಎಂದು ತಡೆವೊಡ್ಡಲು ಬಂದ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಸ್ಥಳೀಯರು ಓಡಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ದಾರ ಗೊಂಡು ಬ್ರಹ್ಮಕಲಶೋತ್ಸವ ನಿನ್ನೆ ನಡೆದಿತ್ತು. ಇಂದು ಷಷ್ಠಿ ಮಹೋತ್ಸವಕ್ಕೆ ಕೂಡ ಸಾವಿರಾರು ಜನ ಭಕ್ತರು ಭಾಗವಹಿಸುತ್ತಾರೆ. ಪ್ರತಿ ವರ್ಷವೂ ಜಾತ್ರೆಯಲ್ಲಿ ಯಾವುದೇ ಭೇದಭಾವವಿಲ್ಲದೆ ವ್ಯಾಪಾರ ವಹಿವಾಟು ನಡೆಯುತ್ತದೆ.

ಆದರೆ ನಿನ್ನೆ ಸ್ಥಳೀಯ ಹಿಂದೂ ಸಂಘಟನೆಯ ಮುಖಂಡ ತನ್ನ ನಾಲ್ವರೂ ಬೆಂಬಲಿಗರೊಂದಿಗೆ ಬಂದು ಅನ್ಯಧರ್ಮಿಯರಿಗೆ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.

ತಕ್ಷಣ ಮಾಹಿತಿ ತಿಳಿದ ಸ್ಥಳೀಯ ಯುವಕರೆಲ್ಲ ಸೇರಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು

ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ ಸ್ಥಳದಿಂದ ಓಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಹಿಂದೂ ಸಂಘಟನೆಯ ಮುಖಂಡ ಬಿಜೆಪಿ ಪಕ್ಷದ ಮುಸ್ಲಿಂ ಕಾರ್ಯಕರ್ತನನ್ನು ವ್ಯಾಪಾರಕ್ಕೆ ಆಹ್ವಾನಿಸಿ ಸಂಜೆ ಆತನನ್ನು ತರಾಟೆಗೆ ತೆಗೆದುಕೊಂಡು ಅಲ್ಲಿ ವ್ಯಾಪಾರ ಮಾಡಬಾರದು ಎಂದು ಹೇಳಿ ಹಿಂದಕ್ಕೆ ಕಳುಹಿಸಿದ್ದ ಎನ್ನುವುದೂ ಕೂಡ ಬಹಿರಂಗವಾಗಿದೆ.