ಡೈಲಿ ವಾರ್ತೆ: 02 ಡಿಸೆಂಬರ್ 2022

ಕೊಪ್ಪಳ: ‘ಕಲಿಕೋಪಕರಣ ಮೇಳ’ ಹಾಗೂ ಶಿಕ್ಷಕರ ಸಮಾಲೋಚನೆ ಸಭೆ

ಕೊಪ್ಪಳ : ಜಿಲ್ಲೆಯ ಕುಕನೂರ ತಾಲ್ಲೂಕಿನ ಯರೇಹಂಚಿನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿನ್ನಾಳ ಕ್ಲಸ್ಟರ್ ಮಟ್ಟದ ಕಲಿಕೋಪಕರಣ ಮೇಳ ಮತ್ತು ಶಿಕ್ಷಕರ ಸಮಾಲೋಚನೆ ಸಭೆಯನ್ನು ಶುಕ್ರವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ತಿರುಕಪ್ಪ ಕಮತರ ವಹಿಸಿದ್ದರು. ಕುಕನೂರ ವಲಯದ
ಬಿ ಆರ್ ಪಿ ನೋಡಲ್ ಅಧಿಕಾರಿ ಮಹೇಶ್ ಅಸೂಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ವಿಶೇಷ ಉಪನ್ಯಾಸಕರಾಗಿ ಯಡಿಯಾಪೂರ ಸಿ.ಆರ್.ಪಿ. ಮಂಜುನಾಥಯ್ಯ ತೆಗ್ಗಿನಮನಿ ಆಗಮಿಸಿದರು. ಸತೀಶ್ ಚೆನ್ನಪ್ಪಗೌಡರ ಕಾರ್ಯಕ್ರಮ ನಿರೂಪಿಸಿದರು. ಬಿನ್ನಾಳ ವಲಯದ ಸಂಪನ್ಮೂಲ ವ್ಯಕ್ತಿ ಶಿವಕುಮಾರ ಹೊಸಮನಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲಿಕೋಪಕರಣಗಳು ಮಕ್ಕಳ ಕಲಿಕೆಯನ್ನು ಹಾಗೂ ಶಿಕ್ಷಕರು ಬೋಧಿಸುವ ಕೌಶಲ್ಯವನ್ನು ಗಟ್ಟಿಗೊಳಿಸುತ್ತವೆ, ಎಂದು ಅಭಿಪ್ರಾಯವನ್ನು ಪಟ್ಟರು.

ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ಸಾದರ ಅವರು ಸ್ವಾಗತಿಸಿದರು. ಶ್ರೀನಿವಾಸ ತಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿನ್ನಾಳ ಕ್ಲಸ್ಟರ್ ನ ಎಲ್ಲಾ ಶಿಕ್ಷಕರು ಇದ್ದರು.