ಡೈಲಿ ವಾರ್ತೆ: 21/ಮೇ /2024
ಮಂಡಕ್ಕಿ ತಿನ್ನುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು
ಅರೋಗ್ಯ: ಬೊರುಗುಲು, ಮುರುಮುರುಲು, ಮುರಿಲು, ಮಂಡಕ್ಕಿ ಅಥವಾ ಕಡಲೆಪುರಿ, ಪಫ್ಡ್ ರೈಸ್ ಎಂದು ಕರೆಯಲ್ಪಡುವ ಮಂಡಕ್ಕಿ ಎಲ್ಲ ವಯಸ್ಸಿನವರೆಗೂ ಗೊತ್ತು.
ಇದು ಮಕ್ಕಳು ಮತ್ತು ದೊಡ್ಡವರು ಎಲ್ಲರಿಗೂ ಇಷ್ಟವಾಗುವ ಮುಖ್ಯ ಆಹಾರಗಳಲ್ಲಿ ಒಂದಾಗಿದೆ.
ಇನ್ನೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಹಿಡಿದು ರಕ್ತದೊತ್ತಡವನ್ನು ಸಹ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
* ಮಂಡಕ್ಕಿಯಲ್ಲಿ ಕಾಬೋಹೈಡ್ರೇಟ್ಸ್ ಹೆಚ್ಚಾಗಿದೆ. ಆದ್ದರಿಂದ ಸ್ವಲ್ಪವೇ ತಿಂದರೂ ದೇಹವು ಹಗುರವಾಗಿರುವುದೇ ಅಲ್ಲದೆ ಹೆಚ್ಚು ಶಕ್ತಿ ಸಿಗುವಂತೆ ಮಾಡುತ್ತದೆ.
* ಒಳ್ಳೆಯ ಜೀರ್ಣಕಾರಿಯಾಗಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ.
* ಮಂಡಕ್ಕಿ ಮೆದುಳಿಗೆ ಚುರುಕುತನವನ್ನು ಕೊಡುತ್ತದೆ.
* ನರಮಂಡಲವನ್ನು ಉತ್ತೇಜನಗೊಳಿಸುತ್ತದೆ.
* ಮಂಡಕ್ಕಿಯಲ್ಲಿ ನಾರಿನಂಶ ಹೆಚ್ಚಾಗಿದೆ. ಹಾಗಾಗಿಯೇ ಜೀರ್ಣಿಸಿಕೊಳ್ಳಲು ತುಂಬ ಸುಲಭ.
* ಕರುಳಿನ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.
* ಪುರಿಯಲ್ಲಿ ವಿಟಮಿನ್ “ಡಿ’, ವಿಟಮಿನ್ “ಬಿ’ ಕಾಂಪ್ಲೆಕ್ಸ್ ನಲ್ಲಿರುವ ರೈಬೋ ಪ್ಲೇವಿನ್, ಥಯಾಮಿನ್ ಹೆಚ್ಚಾಗಿದೆ.
* ಕ್ಯಾಲ್ಸಿಯಂ, ಐರನ್ ಕೂಡ ಹೆಚ್ಚಾಗಿ ಇದೆ. ಹಾಗಾಗಿ ಇವು ಮೂಳೆ, ಹಲ್ಲುಗಳನ್ನು ಬಲಶಾಲಿಯಾಗಿರುವಂತೆ ಮಾಡುತ್ತದೆ. ಇದು ಆಸ್ಟಿಯೋಪೋರೋಸಿಸ್ಸನ್ನು ನಿವಾರಿಸುತ್ತದೆ.
* ಇದು ಚರ್ಮಕ್ಕೆ ಒಳ್ಳೆಯದು. ಚರ್ಮವು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.
* ಮಂಡಕ್ಕಿ ಬುದ್ಧಿಶಕ್ತಿಯನ್ನು, ಕಲಿಯುವ ಶಕ್ತಿಯನ್ನೂ ಬೆಳೆಸುತ್ತದೆ.
* ಮಂಡಕ್ಕಿಯಲ್ಲಿರುವ ಶಕ್ತಿಯುತವಾದ ಆ್ಯಂಟಿ ಆಕ್ಸಿಡೆಂಟ್ಸ್‌ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕು ಬಾರದಂತೆ ತಡೆಯುತ್ತದೆ.
* ಕ್ಯಾನ್ಸರ್‌ಗೆ ಕಾರಣವಾಗುವ ಪ್ರೀರ್ಯಾಡಿಕಲ್ಲನ್ನು ನಿವಾರಿಸುತ್ತದೆ.
* ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿಗೆ ಇರುವುದರಿಂದ ಡಯಾಬಿಟಿಸ್ ಇರುವವರು ಇದನ್ನು ಮಿತವಾಗಿ ತಿನ್ನಬೇಕು.
* ತೂಕ ಇಳಿಸಬೇಕೆಂದುಕೊಂಡವರಿಗೆ ಪುರಿಯಿಂದ ಮಾಡಿದ ಸ್ನ್ಯಾಕ್ಸ್ ಒಳ್ಳೆಯದು.
ಹೀಗಾಗಿ ಮಂಡಕ್ಕಿ ತಿನ್ನುವುದು ಒಳ್ಳೆಯದು.