ಡೈಲಿ ವಾರ್ತೆ: 28 ಡಿಸೆಂಬರ್ 2022

ಉಡುಪಿ: ಕಂಠಪೂರ್ತಿ ಕುಡಿದು ಶಾಲೆಯ ಆವರಣದಲ್ಲಿ ಮಲಗಿದ ಶಿಕ್ಷಕ

ಉಡುಪಿ: ಶಿಕ್ಷಕನೋರ್ವ ಕಂಠಪೂರ್ತಿ ಮದ್ಯಪಾನ ಮಾಡಿ ಶಾಲೆಯ ಕೊಠಡಿಯ ಆವರಣದಲ್ಲಿ ಮಲಗಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.

ಪೆರ್ಡೂರು ಗ್ರಾಮದ ಅಲಂಗಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ವಿಡಿಯೋ ಇದು ಎನ್ನಲಾಗಿದೆ.

ಶಿಕ್ಷಕ ಕೃಷ್ಣಮೂರ್ತಿ ಶಾಲೆಯಲ್ಲಿ ತರಗತಿ ನಡೆಯುತ್ತಿದ್ದ ವೇಳೆಯೇ ಕಂಠಪೂರ್ತಿ ಕುಡಿದು ಆವರಣದಲ್ಲಿ ಮಲಗಿದ್ದರು ಎನ್ನಲಾಗಿದೆ.

ವಿಡಿಯೋ ವೈರಲ್ ಬೆನ್ನಲ್ಲೆ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರ ಬೇಜವಾಬ್ದಾರಿಯುತ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.ಎಷ್ಟೋ ಜನ ಕೆಲಸ‌ ಇಲ್ಲದೆ ಕಣ್ಣೀರಿನಲ್ಲಿದ್ದಾರೆ.ಈಗಿರುವಾಗ ಸಿಕ್ಕ ಕೆಲಸವನ್ನು ಈ ರೀತಿ ದುರುಪಯೋಗ ಮಾಡುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.