ಡೈಲಿ ವಾರ್ತೆ: 29 ಡಿಸೆಂಬರ್ 2022

ಚಲಿಸುತ್ತಿರುವ ವಿಮಾನದಲ್ಲಿ ಪ್ರಯಾಣಿಕರ ಹೊಡೆದಾಟ
( ವಿಡಿಯೋ ವೈರಲ್ )


ಹೊಸದಿಲ್ಲಿ: ಚಲಿಸುತ್ತಿರುವ ವಿಮಾನದಲ್ಲಿ ಪ್ರಯಾಣಿಕರು ಹೊಡೆದಾಡಿಕೊಂಡ ಘಟನೆ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ನಡೆದಿದೆ.


ಹಳೆಯ ಸ್ನೇಹಿತರು ವಿಮಾನದಲ್ಲಿ ಎದುರಾದಾಗ ಯಾವುದೋ ವಿಷಯದ ಕುರಿತಂತೆ ಮಾತಿನ ಚಕಮಕಿ ನಡೆದು ಸಂಘರ್ಷ ನಡೆದಿದೆ ಎಂದು ಹೇಳಲಾಗಿದೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಬ್ಯಾಂಕಾಕ್‌ನಿಂದ ಕೋಲ್ಕತ್ತಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.

ಘಟನೆಯ ವೀಡಿಯೋ ವ್ಯಾಪಕ ವೈರಲ್ ಆಗಿದೆ. ಒಬ್ಬ ವ್ಯಕ್ತಿ ಕೋಪದಿಂದ ಮತ್ತೊಬ್ಬನ ಕಪಾಳಕ್ಕೆ ಹೊಡೆಯುತ್ತಾನೆ. ಬಳಿಕ ಅದೇ ವ್ಯಕ್ತಿ ಕನ್ನಡಕ ತೆಗೆದು ನಿರಂತರವಾಗಿ ಹಲ್ಲೆ ನಡೆಸುವ ದೃಶ್ಯದಲ್ಲಿ ವೀಡಿಯೋದಲ್ಲಿ ಕಾಣಬಹುದಾಗಿದೆ.