ಡೈಲಿ ವಾರ್ತೆ: 29 ಡಿಸೆಂಬರ್ 2022

ಮಂಗಳೂರಿನ ಯುವಕ ಸೌದಿ ಅರೇಬಿಯಾದಲ್ಲಿ ಅಪಘಾತದಿಂದ ಮೃತ್ಯು.!

ಮಂಗಳೂರು:ಕಾರು ಮತ್ತು ಲಾರಿ‌ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಗಳೂರಿನ ಸುರತ್ಕಲ್‌ ನಿವಾಸಿ ಯುವಕ ಮೃತಪಟ್ಟ ಘಟನೆ ನಡೆದಿದೆ.

ತಡಂಬೈಲ್‌ ನಿವಾಸಿ ಫಾಝಿಲ್ ಮೃತಪಟ್ಟ ಯುವಕ. ಫಾಝಿಲ್ ಗೆ ಕಳೆದ ವರ್ಷ ವಿವಾಹವಾಗಿತ್ತು.

ಸೌದಿ ಅರೆಬಿಯಾದ ಅಲ್ ಅಸ ಎಂಬಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಫಾಝಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.