ಡೈಲಿ ವಾರ್ತೆ: 30 ಡಿಸೆಂಬರ್ 2022

ಕ್ರಿಕೆಟರ್ ರಿಷಭ್ ಪಂತ್ ಕಾರು ಅಪಘಾತ; ರಿಷಬ್ ಸ್ಥಿತಿ ಗಂಭೀರ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಷಭ್ ಪಂತ್ ಅವರ ಕಾರು ಅಪಘಾತವಾಗಿದ್ದು, ರಿಷಬ್ ಪಂತ್ ಸ್ಥಿತಿ ಗಂಭೀರವಾಗಿದೆ.

ದೆಹಲಿಯಿಂದ ಮನೆಗೆ ತೆರಳುವಾಗ ರೂರ್ಕಿಯ ನರ್ಸನ್ ಗಡಿಯಲ್ಲಿರುವ ಹಮ್ಮದ್ಪುರ್ ಝಾಲ್ ಬಳಿ ಅವರ ಕಾರು ಅಪಘಾತಕ್ಕೀಡಾಗಿದ್ದು, ಬಳಿಕ ಕಾರಿಗೆ ಬೆಂಕಿ ತಗುಲಿದೆ.

ಘಟನೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ರಿಷಭ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ರವಾನಿಸಲಾಗಿದೆ.

ರಿಷಭ್ ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ದೇಹತ್ ಸ್ವಪನ್ ಕಿಶೋರ್ ಸಿಂಗ್ ತೆರಳಿದ್ದಾರೆ.