ಡೈಲಿ ವಾರ್ತೆ: 04/ಮೇ /2024

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರ ಕೊರತೆ ನೀಗಿಸಲು ಹಾಗೂ ಕ್ಷೇತ್ರದ ಅಭಿವೃದ್ದಿಗೆ ನನ್ನನ್ನು ಗೆಲ್ಲಿಸಿ : ಡಾ ಪ್ರಭಾ ಮಲ್ಲಿಕಾರ್ಜುನ

ಹರಪನಹಳ್ಳಿ :- ಕಳೆದ 25ವರ್ಷಗಳಿಂದ 5bಬಾರಿ ಗೆದ್ದ ಇಲ್ಲಿಯ ಬಿಜೆಪಿ ಲೋಕಸಭಾ ಸದಸ್ಯರು ಏನೂ ಅಭಿವೃದ್ದಿ ಮಾಡದೇ ಇರುವುದು ನಿಮಗೂ ಗೊತ್ತಿದೆ, ಇಲ್ಲಿಯ ಲೋಕಸಭಾ ಸದಸ್ಯರ ಸಾಧನೆ ಶೂನ್ಯವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸಂಜೆ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಐಬಿ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ ಈ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ, ಉದ್ಯೋಗ ಅವಕಾಶಗಳನ್ನು ಸೃಷ್ಠಿಸಬೇಕಾಗಿದೆ, ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕಾಗುತ್ತದೆ, ಐಟಿ-ಬಿಟಿ ಕಂಪನಿಗಳನ್ನ ಬರಮಾಡಿಕೊಳ್ಳಬೇಕಾಗಿದೆ ಇದರ ಜೊತೆಗೆ ನಮ್ಮ ಹರಪನಹಳ್ಳಿ ಹಾಗೂ ಜಗಳೂರು ಕ್ಷೇತ್ರಗಳಲ್ಲಿ ಸರ್ಕಾರಿ ಕೈಗಾರಿಕೆಗಳ ಕೊರತೆ ಇದೆ, ಮಹಿಳೆಯರಿಗೆ ಗಾರ್ಮೆಂಟ್ಸ್ ಕೈಗಾರಿಕೆಗಳ ಸ್ಥಾಪನೆಯ ಅಗತ್ಯವಿದೆ.

ನಮ್ಮ ಉತ್ಪನ್ನಗಳಾದ ಅಡಿಕೆ ಮತ್ತು ಮೆಕ್ಕಜೋಳದ ಕಾರ್ಖಾನೆಗಳ ಸ್ಥಾಪನೆ ಆಗಬೇಕಿದೆ, ಎಥೆನಾಲ್ ಪ್ಲಾಂಟ್ ಗಳ ಸ್ಥಾಪನೆಯಾಗಬೇಕು, ಒಳ್ಳೆಯ ಶಿಕ್ಷಣ ಸಂಸ್ಥೆಗಳನ್ನು ಹಾಗೂ ವಸತಿ ಶಾಲೆಗಳ ಮತ್ತು ನಿಲಯಗಳ ನಿರ್ಮಾಣ, ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಾಗಿದೆ, ಎಲ್ಲ ಸಮಸ್ಯಗಳನ್ನು ಬಗೆಹರಿಸಲು ಪ್ರಭಾ ಪ್ರಣಾಳಿಕೆಯನ್ನು ಸಿದ್ದಪಡಿಸಿದ್ದೇನೆ ಇದು ಜನರ ಪ್ರಣಾಳಿಕೆ ಆಗಿದ್ದು, ನಾನು ಸಂಸದರಾಗಿ ಆಯ್ಕೆಯಾದ ನಂತರ ನಿಮ್ಮ ಕ್ಷೇತ್ರದ ಶಾಸಕರು ಮತ್ತು ಮಂತ್ರಿಗಳೊAದಿಗೆ ಸೇರಿ ಈ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಮತದಾರರಿಗೆ ಭರವಸೆ ನೀಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎಂಟು ಜನ ಶಾಸಕರಲ್ಲಿ ಏಳು ಜನ ಶಾಸಕರು ಕಾಂಗ್ರೆಸ್ ಪಕ್ಷದವರಾಗಿದ್ದು, ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನರವರು ಇದ್ದಾರೆ, ಆದರೆ ಸಂಸದರ ಕೊರತೆ ಎದ್ದು ಕಾಣುತ್ತದೆ ಎಂದು ಹೇಳಿದರು.


ಎಲ್ಲಾ ಭರವಸೆಗಳು ಈಡೇರಬೇಕಾದರೆ ಮೇ ೭ರಂದು ನಡೆಯುವ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಗುರುತಿಗೆ ಮತದಾನ ಮಾಡಿ, ಮತದಾನದ ಪ್ರಮಾಣ ಹೆಚ್ಚಿಸಿ ಅತೀ ಹೆಚ್ಚು ಮತಗಳಿಂದ ನನ್ನನ್ನು ಜಯಶಾಲಿಯಳನ್ನಾಗಿ ಮಾಡಿ ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ವಿನಂತಿಸಿಕೊAಡರು.

ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನರವರು ಮಾತನಾಡಿ ಹರಪನಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದೇನೆ, ಹರಪನಹಳ್ಳಿ ಪಟ್ಟಣಕ್ಕೆ ೧೦೦ಕೋಟಿ ಅನುದಾನ ತಂದಿದ್ದೇನೆ, ಅದರಲ್ಲಿ ಪಟ್ಟಣದ ಅಯ್ಯನ ಕೆರೆ ಸ್ವಚ್ಚತೆ ೩೪ಕೋಟಿ ಮೀಸಲಿದೆ ಜೂನ್ ತಿಂಗಳಿAದ ಕಾಮಗಾರಿ ಪ್ರಾರಂಭವಾಗುತ್ತದೆ ಎಂದರು.

ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ನಂಬಿಕೆ ಇದ್ದು, ಬಡವರ, ಮಹಿಳೆಯರ ಪರವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ, ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಆದ್ದರಿಂದ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಹರಪನಹಳ್ಳಿ ಕ್ಷೇತ್ರದಿಂದ ಹೆಚ್ಚಿನ ಮತನೀಡಿ ಅವರ ಗೆಲುವಿಗೆ ನಾವು ಸಹಕಾರಿಯಾಗಬೇಕು ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಪಟ್ಟಣದ ಹರಿಹರ ವೃತ್ತದಿಂದ ಹೊಸಪೇಟೆ ರಸ್ತೆಯ ಮೂಲಕ ಪ್ರವಾಸಿ ಮಂದಿರದವರೆಗೆ ಬೃಹತ್ ಜನಸ್ತೋಮದೊಂದಿಗೆ  ಮೇ೭ರಂದು ನಡೆಯುವ ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಹಾಗೂ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನರವರು ಮತ್ತು ಕಾಂಗ್ರೆಸ್ ಮುಖಂಡರಾದ ಅರಸಿಕೆರೆ ಎನ್.ಕೊಟ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ ಅಂಜಿನಪ್ಪ ಕಾಂಗ್ರೆಸ್ ಪಕ್ಷದ ಮುಖಂಡರೊAದಿಗೆ ಹಾಗೂ ಕಾರ್ಯಕರ್ತರೊಂದಿಗೆ ಹರಪನಹಳ್ಳಿ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅರಸಿಕೆರಿ ಎನ್ ಕೊಟ್ರೇಶ್ ಮಾತನಾಡಿದರು, ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ ಅಂಜಿನಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರ ಗೌಡ್ರು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮೀ, ಯುತ್ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ಮುಖಂಡರಾದ ಬೇಲೂರು ಅಂಜಪ್ಪ, ಎಂ.ಮಲ್ಲಿಕಾರ್ಜುನ, ಶಶಿಧರ ಪೂಜಾರ್, ಹೆಚ್.ಕೆ ಹಾಲೇಶ್, ಪುರಸಭೆ ಸದಸ್ಯರಾದ ಟಿ.ವೆಂಕಟೇಶ್, ಹೆಚ್.ಕೊಟ್ರೇಶ್, ಜಾಕೀರ್ ಹುಸೇನ್, ಉದ್ದಾರ ಗಣೇಶ್, ಗೊಂಗಡಿ ರಾಜಣ್ಣ, ಟಿ.ಹೆಚ್.ಎಂ ಮಂಜುನಾಥ್, ಹಲಗೇರಿ ಮಂಜಪ್ಪ, ಹುಲಿಕಟ್ಟಿ ಚಂದ್ರಪ್ಪ, ಮೈದೂರು ಓ.ರಾಮಪ್ಪ, ನೀಲಗುಂದ ಮಾಳ್ಗಿ ಸಣ್ಣಪ್ಪ, ಬಾಣದ ಅಂಜಿನಪ್ಪ, ತೆಲಿಗಿ ಉಮಾಕಾಂತ್, ಮಹಾಂತೇಶ್ ನಾಯ್ಕ್, ಇಟ್ಟಿಗುಡಿ ಅಂಜಿನಪ್ಪ, ಮಾಳ್ಗಿ ರಮೇಶ್, ಜಿಶಾನ್, ಮುಜುಬುರ್ ರಹಿಮಾನ್, ಶೌಖತ್ ಅಲಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.