ಡೈಲಿ ವಾರ್ತೆ: 31 ಡಿಸೆಂಬರ್ 2022

ಸುರತ್ಕಲ್ :ಲೈಟ್ ಹೌಸ್ ಬೀಚ್ ನಲ್ಲಿ ಗೆಳೆಯನ ಜೊತೆ ಈಜಲು ಹೋದ ಯುವಕ ಸಮುದ್ರ ಪಾಲು

ಮಂಗಳೂರು: ಗೆಳೆಯನ ಜೊತೆ ಸಮುದ್ರದಲ್ಲಿ ಈಜಲು ಹೋದ ಯುವಕ ಸಮುದ್ರ ಪಾಲಾಗಿರುವ ಘಟನೆ ಸುರತ್ಕಲ್ ಸಮೀಪದ ಲೈಟ್ ಹೌಸ್ ಬೀಚ್ ನಲ್ಲಿ ಮಧ್ಯಾಹ್ನ ಸಂಭವಿಸಿದೆ.

ನಾಪತ್ತೆಯಾದ ಯುವಕನನ್ನು ಕಾನ ನಿವಾಸಿ ಸತ್ಯಂ (18) ಎಂದು ಗುರುತಿಸಲಾಗಿದೆ.
ಶನಿವಾರ ಗೆಳೆಯ ಪ್ರಭಾಕರನ್ ಜೊತೆ ಸತ್ಯಂ ಸುರತ್ಕಲ್ ಲೈಟ್ ಹೌಸ್ ಬಳಿಯ ಸಮುದ್ರ ತೀರಕ್ಕೆ ತೆರಳಿದ್ದು ಇಬ್ಬರು ನೀರಿಗಿಳಿದಿದ್ದಾರೆ ಈ ವೇಳೆ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ ಆದರೆ ಪ್ರಭಾಕರನ್ ಈಜಿ ದಡ ಸೇರಿದರೆ ಸತ್ಯಂ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಕ್ಕಿ ನಾಪತ್ತೆಯಾಗಿದ್ದಾನೆ, ಈ ವೇಳೆ ಗೆಳೆಯ ಪ್ರಭಾಕರನ್ ಸ್ಥಳೀಯರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳೀಯ ಮೀನುಗಾರರು ನಾಪತ್ತೆಯಾದ ಯುವಕನ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಸತ್ಯಂ ಕೆಪಿಟಿಯಲ್ಲಿ ಡಿಪ್ಲೋಮಾ ಫೈನಲ್ ಇಯರ್ ಓದುತ್ತಿದ್ದಾನೆ ಎನ್ನಲಾಗಿದೆ.