ಡೈಲಿ ವಾರ್ತೆ: 01ಜನವರಿ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ ಬಾಸಗೋಡದಲ್ಲಿ ನಡೆದ ಸುಬೋಧ ಯಕ್ಷ ಸಪ್ತಾಹ ಕಾರ್ಯಕ್ರಮ: ಯಕ್ಷಗಾನಕ್ಕೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಹೊಸ ಇಮೇಜ್ ನೀಡಿದ್ದಾರೆ: ಸಚಿವ ಕೋಟ

ಅಂಕೋಲಾ : ಯಕ್ಷಗಾನ ಕಲೆ ಕರಾವಳಿ ಪ್ರದೇಶಗಳಲ್ಲಿ ವಿವಿಧ
ರೂಪಗಳಲ್ಲಿ ಕಂಡು ಬರುವ ಜತೆ ಕನ್ನಡ ಭಾಷೆಯ
ಪರಿಶುದ್ಧತೆಯನ್ನು ಉಳಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸುಬೋಧ
ಯಕ್ಷಗಾನ ಮಂಡಳಿ ಶತಮಾನ ಕಂಡಿರುವುದು ನಾನು ಪ್ರಥಮವಾಗಿ ನೋಡಿದ್ದು. ಯಕ್ಷಗಾನಕ್ಕೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಹೊಸ ಇಮೇಜ್ ನೀಡಿದ್ದಾರೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸ್ಮರಿಸಿಕೊಂಡರು.


ತಾಲೂಕಿನ ಬಾಸಗೋಡ ಸುಬೋಧ ಯಕ್ಷಗಾನ ಮಂಡಳಿಯ
ಶತಮಾನೋತ್ಸವದ ಸವಿ ನೆನಪಿಗಾಗಿ ಶುಕ್ರವಾರ ಆಯೋಜಿಸಿದ ಯಕ್ಷಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿ, ಯಕ್ಷಗಾನ ಭಾರತೀಯ ಪರಂಪರೆ ಹಾಗೂ ಸಂಸ್ಕøತಿ ಅತ್ಯಂತ ಶ್ರೀಮಂತವಾಗಿದ್ದು, ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜತೆ ಯುವಜತೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು.


ಯು.ಎಸ್.ಎ ಮೈಕ್ರೋಲ್ಯಾಂಡ್ ಚೀಫ್ ಡೆಲಿವರ್ ಆಫೀಸರ್ ಯಕ್ಷಗಾನ ಕಲಿಕಾ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸುಬೋಧ ಯಕ್ಷ ಪ್ರಶಸ್ತಿಯನ್ನು ನಾರಾಯಣ
ಮೊನ್ನಪ್ಪ ನಾಯಕ, ಗಣಪತಿ ರಾಮ ಚಂದ್ರ ನಾಯಕ, ಹರಿಶ್ವಂದ್ರ ಮಾಣಿ ನಾಯಕ, ಬೀರಣ್ಣ ನಾಯಕ ಅಡಿಗೋಣ ಮತ್ತು ನಾಗರಿಕ ಸನ್ಮಾನವನ್ನು ಮಂಗಳೂರು ಎಜಿ.ಆಸ್ಪತ್ರೆಯ ವೈದ್ಯ ಡಾ. ರಾಘವೇಂದ್ರ ನಾಯಕ ಅವರಿಗೆ ಸನ್ಮಾನಿಸಲಾಯಿತು.


ಮಾಜಿ ಶಾಸಕ ಸತೀಶ ಸೈಲ್ ಬಹುಮಾನ ವಿತರಿಸಿದರು. ಜಿಪ.ಮಾಜಿ ಅಧ್ಯಕ್ಷ ರಮಾನಂದ ನಾಯಕ ಅಧ್ಯಕ್ಷತೆವಹಿಸಿದರು. ಶಿಕ್ಷಕಿ ರಾಜಮ್ಮಾ ನಾಯಕ ಹಿಚ್ಕಡ (ಭಟ್ಕಳ), ನಾಟಿ ವೈದ್ಯ ಹನುಮಂತ ಬಿ. ಗೌಡ, ಕಾರವಾರ ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜನತಾ ಕ್ರಿಕೆಟ್‍ಕ್ಲಬ್ ಅಧ್ಯಕ್ಷ ರಜತ ನಾಯಕ, ಕಾರ್ಯದರ್ಶಿ ವೈಭವ ನಾಯಕ ಉಪಸ್ಥಿತರಿದ್ದರು.


ಶತಮಾನೋತ್ಸವ ಸಮಿತಿಯ ಸಂಚಾಲಕ ನಾಗರಾಜ ನಾಯಕ ಪ್ರಾಸ್ತವಿಕ ಮಾತನಾಡಿದರು. ವಿವಿಧ ಪದಾಧಿಕಾರಿ ವಿಘ್ನೇಶ್ವರ ಬಿ.ನಾಯಕ, ಭರತ ಡಿ.ಗಾಂವಕರ, ಭುವನ ವಿ.ನಾಯಕ, ಅಕ್ಷಯ ಗಾಂವಕರ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ‘ಸತ್ಯ ಹರಿಶ್ಚಂದ್ರ’ ಪ್ರಸಂಗ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ರಾಮೂರ್ತಿ ನಾಯಕ, ಪ್ರಮುಖರಾದ ವಿಜಯಕುಮಾರ ನಾಯ್ಕ, ಗೋಪು ನಾಯಕ ಅಡ್ಲೂರು, ಬಿಂದೇಶ ನಾಯಕ ಹಿಚ್ಕಡ, ಪ್ರದಿಪ ನಾಯಕ, ಚಂದ್ರಹಾಸ ಎನ್.ನಾಯಕ, ಸುರೇಶ ನಾಯಕ, ನಾರಾಯಣ ನಾಯಕ ಲಕ್ಷ್ಮೇಶ್ವರ,ಶಾಂತಾರಾಮ ನಾಯಕ, ರಾಜೇಶ ಮಾಸ್ತರ, ದೇವಾನಂದ ಗಾಂವಕರ
ಸೇರಿದಂತೆ ಹಲವರು ಪಾಲ್ಗೊಂಡಿದ್ದರು.