



ಡೈಲಿ ವಾರ್ತೆ: 26/April/2024


ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿದ ವ್ಯಕ್ತಿ
ಮೈಸೂರು: ಮಹಾರಾಜರ ಗೆಟಪ್‌ನಲ್ಲಿ ಬಂದು ವ್ಯಕ್ತಿಯೊಬ್ಬರು ಮತದಾನ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕುವೆಂಪುನಗರದ ವಿವೇಕಾನಂದ ಸರ್ಕಲ್ ಬಳಿಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ವಿಶೇಷವಾಗಿ ಮಹಾರಾಜರ ಉಡುಗೆ ತೊಟ್ಟು ಮತದಾನಕ್ಕೆ ಆಗಮಿಸಿ ಜನರನ್ನು ಆಕರ್ಷಿಸಿದ್ದಾರೆ.
ಕುವೆಂಪುನಗರದ ನಿವಾಸಿ ಉಮಾಕಾಂತ್ ಎಂಬ ವ್ಯಕ್ತಿ ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿ ವಿಶೇಷವಾಗಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಇವರ ಮಹಾರಾಜರ ತೊಡುಗೆ ನೋಡುಗರ ಗಮನಸೆಳೆದಿದೆ.