ಡೈಲಿ ವಾರ್ತೆ:11 ಜನವರಿ 2023

ಹೆಬ್ರಿ:ಚಾಲಕನ ನಿಯಂತ್ರಣ ತಪ್ಪಿ ಓಮ್ಮಿ ಕಾರು ಪಲ್ಟಿ

ಹೆಬ್ರಿ: ಮಣಿಪಾಲದಿಂದ ಹರಿಹರ ಕಡೆಗೆ ಹೋಗುತ್ತಿದ್ದ ಓಮ್ಮಿ ಕಾರು ಹೆಬ್ರಿಯ ಎಸ್‌ಆರ್ ಶಾಲೆಯ ಬಳಿಯ ಹೊಂಡಕ್ಕೆ ಬಿದ್ದಿರುವ ಘಟನೆ ನಡೆದಿದೆ.

ರಸ್ತೆಗೆ ಬಂದ ದನವನ್ನು ತಪ್ಪಿಸಲು ಯತ್ನಿಸಿದ ಓಮ್ಮಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.