ಡೈಲಿ ವಾರ್ತೆ:25 ಜನವರಿ 2023

ಧರ್ಮಸ್ಥಳ: ಅನ್ಯ ಕೋಮಿನ ಜೋಡಿ- ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿನ ಖಾಸಗಿ ಲಾಡ್ಜ್ ಗಳಲ್ಲಿ ಐಡಿ ಕಾರ್ಡ್‌ ನೀಡಿ ರೂಂ ಪಡೆಯಲು ಯತ್ನಿಸುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಜೋಡಿಯನ್ನು ಚಿತ್ರದುರ್ಗ ಜಿಲ್ಲೆಯ ದಾದಫೀರ್ ಮತ್ತು ವಿವಾಹಿತ ಮಹಿಳೆ ಉಮಾ ಎಂಬ ಮಾಹಿತಿ ತಿಳಿದು ಬಂದಿದ್ದು. ಈ ಜೋಡಿಗಳು ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಖಾಸಗಿ ಲಾಡ್ಜ್ ಗಳಲ್ಲಿ ಐಡಿ ಕಾರ್ಡ್ ನೀಡಿ ರೂಂ ಪಡೆಯಲು ಯತ್ನಿಸುತ್ತಿದ್ದರು. ಆದ್ರೆ ಯಾವ ಲಾಡ್ಜ್ ಮಾಲೀಕರು ಕೂಡ ಅನ್ಯಕೋಮಿನ ಜೋಡಿ ಅಗಿದ್ದರಿಂದ ರೂಂ ನೀಡದೆ ವಾಪಸ್ ಕಳುಹಿಸಿದ್ದರು. ಇದರ ಬಗ್ಗೆ ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಇಂದು ಬೆಳಗ್ಗೆ ಇಬ್ಬರನ್ನು ಹಿಡಿದು ವಿಚಾರಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಜೋಡಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರ ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಹಾಗೂ ಅವರು ಯಾವ ಕಾರಣಕ್ಕೆ ಧರ್ಮಸ್ಥಳಕ್ಕೆ ಬಂದಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ, ಅನ್ಯಕೋಮಿನ ವಿಚಾರದ ಮಾಹಿತಿ ತಿಳಿದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.