ಡೈಲಿ ವಾರ್ತೆ:25 ಜನವರಿ 2023

ಧಾರೇಶ್ವರರಿಗೆ ಉಡುಪ ಪ್ರಶಸ್ತಿ ಪ್ರದಾನ

ಕೋಟ : ಕಾಲ ಘಟ್ಟದೊಂದಿಗೆ ಸಾಮಾಜಿಕ ವ್ಯವಸ್ಥೆ ಬದಲಾದಂತೆ ಯಕ್ಷಗಾನವೂ ಪರಂಪರೆಯೊಂದಿಗೆ ಹೊಸತನವನ್ನು ಬೆಸೆದುಕೊಂಡು ಸಾಗುತ್ತಿರಬೇಕು.
ಶ್ರೀಧರ ಹಂದೆಯವರೊಂದಿಗೆ ಸಾಲಿಗ್ರಾಮ ಮಕ್ಕಳ ಮೇಳವನ್ನು
ಕಟ್ಟಿ ಬೆಳೆಸಿದ ಯಕ್ಷಗಾನದ ಸಾಧಕ, ಸಿದ್ಧಿ ಪುರುಷ, ಸಾಹಿತ್ಯ
ಕ್ರೀಡೆ ಎಲ್ಲಾ ರಂಗದಲ್ಲೂ ಮೇರು ವ್ಯಕ್ತಿತ್ವವನ್ನು ಸಾಧಿಸಿದ
ಕಾರ್ಕಡ ಶ್ರೀನಿವಾಸ ಉಡುಪರ ನೆನಪಿನ ಪ್ರಶಸ್ತಿಯನ್ನು
ಸ್ವೀಕರಿಸುತ್ತಿರುವುದು ಪೂರ್ವ ಜನ್ಮದ ಸುಕೃತ.

ಹಾರಾಡಿ ಮಟಪಾಡಿ ಯಕ್ಷಗಾನ ಶೈಲಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಉಡುಪರು ಹಂದೆಯವರು ಸಾಲಿಗ್ರಾಮ ಮಕ್ಕಳ ಮೇಳದ ಮೂಲಕ ಮಾಡಿರುವುದು ಅಭಿನಂದನೀಯ” ಎಂದು ರಾಜ್ಯ ಪ್ರಶಸ್ತಿ ಪುರಸ್ಕøತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಹೇಳಿದರು.

ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಆಯೋಜನೆಯಲ್ಲಿ
ಕೋಟದ ಪಟೇಲರ ಮನೆಯ ಅಂಗಣದಲ್ಲಿ ಜನವರಿ 23, ಸೋಮವಾರದಂದು ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ,
ಕ್ರೀಡಾಪಟು, ಕಲಾ ಸಾಹಿತಿ, ಮಕ್ಕಳ ಮೇಳದ
ಸ್ಥಾಪಕರಲ್ಲೋರ್ವರಾದ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ ಮತ್ತು ಉಡುಪ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಧಾರೇಶ್ವರ
ಮಾತನಾಡಿದರು.

ಧಾರೇಶ್ವರ ದಂಪತಿಗಳನ್ನು ಗೌರವಿಸಲಾಯಿತು.
“ ತಾವು ಬಾಲ್ಯದಲ್ಲಿ ಕಂಡುಂಡ ಯಕ್ಷಗಾನದ
ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವಲ್ಲಿ ಮಕ್ಕಳ ಮೇಳದ
ಕನಸು ಕಂಡವರು ಕಾರ್ಕಡ ಶ್ರೀನಿವಾಸ ಉಡುಪರು. ರಾಷ್ಟ್ರ
ಪ್ರಶಸ್ತಿ ಪಡೆದ ಶಿಕ್ಷಕರಾಗಿ, ನಾಲ್ಕು ಯಕ್ಷರೂಪಕಗಳಂತಹ ಮೌಲಿಕ ಕೃತಿಯ ರಚಯಿತರಾಗಿ, ಅನೇಕ ನಾಟಕಗಳನ್ನು ಬರೆದ ಸಾಹಿತಿಗಳಾಗಿ ಗುರುತಿಸಿಕೊಂಡ ಉಡುಪರ ಸಂಸ್ಮರಣೆ ಪುಣ್ಯದ ಕಾಯಕ” ಎಂದು ಮಕ್ಕಳ ಮೇಳದ ಪ್ರಾಕ್ತನ ಕಲಾವಿದ ಬೆಂಗಳೂರಿನ ಲಿಯೋಸ್ ಇಸ್ರೋನ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಎಚ್. ಗಣೇಶ್ ಶಾನುಭಾಗ್ ಹೇಳಿದರು.
ಮಕ್ಕಳ ಮೇಳದ ಕಾರ್ಯಾಧ್ಯಕ್ಷ ಮಹೇಶ ಉಡುಪ
ಅಧ್ಯಕ್ಷತೆವಹಿಸಿದ್ದರು.ಹೈದರಾಬಾದ್‍ನ ಯಕ್ಷಗಾನ
ಪೋಷಕರಾದ ಮಾರಣಕಟ್ಟೆ ಕೃಷ್ಣ ಮೂರ್ತಿ ಮಂಜ,
ಕಲ್ಕೂರ ಪ್ರತಿಷ್ಠಾನ ಮಂಗಳೂರಿನ ಪ್ರದೀಪ ಕುಮಾರ
ಕಲ್ಕೂರ, ಮಕ್ಕಳ ಮೇಳದ ಸ್ಥಾಪಕ ಎಚ್, ಶ್ರೀಧರ ಹಂದೆ.ಅನ್ನ ಪೂರ್ಣ ಉಡುಪ, ಕೆ. ಶ್ರೀಧರ ಉಡುಪ, ವಿನಿತ ಹಂದೆ
ಉಪಸ್ಥಿತರಿದ್ದರು.

ಮಕ್ಕಳ ಮೇಳದ ಅಧ್ಯಕ್ಷ ಬಲರಾಮ ಕಲ್ಕೂರ ಸ್ವಾಗತಿಸಿದರು.
ಮಂಗಳೂರಿನ ಕಲಾಪೋಷಕ ಜನಾರ್ದನ ಹಂದೆ ಎಚ್,
ವಂದಿಸಿದರು. ಕಾರ್ಯದರ್ಶಿ ಸುಜಯೀಂದ್ರ ಹಂದೆ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಮೊದಲು ಸುಬ್ರಹ್ಮಣ್ಯ ಧಾರೇಶ್ವರ,
ಚಂದ್ರಕಾಂತ ಮೂಡುಬೆಳ್ಳೆ ಮತ್ತು ಬಳಗದವರಿಂದ ಯಕ್ಷ
ರಸ ಗಾನ ಸುಧಾ, ಸಭಾ ಕಾರ್ಯಕ್ರಮದ ಬಳಿಕ ಡಾ| ಶ್ರೀಪಾದ
ಭಟ್ ಪರಿಕಲ್ಪನೆಯ, ಕಾವ್ಯ ಹಂದೆ ಅಭಿನಯದ ಹಕ್ಕಿ ಮತ್ತು
ಅವಳು ಏಕವ್ಯಕ್ತಿ ನಾಟಕ ಪ್ರದರ್ಶನ, ಅತಿಥಿ ಕಲಾವಿದರ
ಕೂಡುವಿಕೆಯಲ್ಲಿ ಗಾಂಗೇಯ ಯಕ್ಷಗಾನ ಪ್ರದರ್ಶನ
ನಡೆಯಿತು.