ಡೈಲಿ ವಾರ್ತೆ: 30 ಜನವರಿ 2023
ಒಡಿಶಾ ಆರೋಗ್ಯ ಸಚಿವರನ್ನು ಗುಂಡಿಟ್ಟು ಹತ್ಯೆ ಮಾಡಿದ ಪೊಲೀಸ್ ಅಧಿಕಾರಿ ಮಾನಸಿಕ ಅಸ್ವಸ್ಥ..!
ಒಡಿಶಾ; ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರ ಮೇಲೆ ಎಎಸ್ ಐ ಗೋಪಾಲಕೃಷ್ಣ ದಾಸ್ ಐದು ಸುತ್ತು ಗುಂಡಿನ ದಾಳಿ ನಡಿಸಿದ್ದರು ಗಂಭೀರವಾಗಿದ್ದ ಸಚಿವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಇದೀಗ ಹತ್ಯೆ ಆರೋಪಿ ಎಎಸ್ ಐ ಗೋಪಾಲಕೃಷ್ಣ ದಾಸ್ ಮನೋವೈದ್ಯರಿಂದ ಬೈಪೋಲಾರ್ ಡಿಸಾರ್ಡರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.
ಮಾನಸಿಕ ಅಸ್ವಸ್ಥತೆಯ ಇರುವ ದಾಸ್‌ಗೆ ಹೇಗೆ ಸೇವಾ ರಿವಾಲ್ವರ್ ನೀಡಲಾಗಿದೆ ಮತ್ತು ಬ್ರಜರಾಜನಗರದ ಪೊಲೀಸ್ ಪೋಸ್ಟ್‌ನ ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂಬ ಪ್ರಶ್ನೆ ಮೂಡಿದೆ.
ಎಂಕೆಸಿಜಿ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ತ್ರಿಪಾಠಿ ಮಾತನಾಡಿ, ಗೋಪಾಲಕೃಷ್ಣ ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ನನ್ನ ಕ್ಲಿನಿಕ್‌ಗೆ ಮೊದಲ ಬಾರಿಗೆ ಭೇಟಿ ನೀಡಿದ್ದರು.ಅವರು ಬೇಗ ಕೋಪಗೊಳ್ಳುತ್ತಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ನನಗೆ ಖಚಿತವಿಲ್ಲ. ನಿಯಮಿತವಾಗಿ ಔಷಧಿ ತೆಗೆದುಕೊಳ್ಳದಿದ್ದರೆ, ರೋಗವು ಮತ್ತೆ ಕಾಣಿಸಿಕೊಳ್ಳುತ್ತದೆ.ಅವರು ನನ್ನನ್ನು ಭೇಟಿಯಾಗಿ ಒಂದು ವರ್ಷ ಕಳೆದಿದೆ ಎಂದು ಹೇಳಿದ್ದಾರೆ.