ಡೈಲಿ ವಾರ್ತೆ:01 ಫೆಬ್ರವರಿ 2023

ಪೆ.2 ರಿಂದ 4 ರ ತನಕ ಕುಂಬಳೆ ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿಯ 15 ನೇ ವಾರ್ಷಿಕ, 2 ನೇ ಸನದ್ ದಾನ ಮಹಾ ಸಮ್ಮೇಳನ

ಬಂಟ್ವಾಳ, ಪೆ.1: ಕುಂಬಳೆ – ವಾದೀ ಸಲಾಮ್, ಬದ್ರಿಯಾ ನಗರದ ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿಯ 15 ನೇ ವಾರ್ಷಿಕ, 2 ನೇ ಸನದ್ ದಾನ ಮಹಾ ಸಮ್ಮೇಳನವು ಪೆ.2 ರಿಂದ 4 ರ ತನಕ ನಡೆಯಲಿದೆ.

ಪೆ.2 ರಂದು ಝಿಯಾರತ್ , ಧ್ವಜಾರೋಹಣ, ಖತ್ಮುಲ್ ಖುರ್ಆನ್, ಉದ್ಘಾಟನಾ ಸಮಾರಂಭ, ಶೀ ಕ್ಯಾಂಪಸ್ ಸನದ್ ದಾನ, ಮಜ್ಲಿಸುನ್ನೂರು ಆತ್ಮೀಯ ಸಂಗಮ ನಡೆಯಲಿದೆ.

ಪೆ.3 ರಂದು ಮಹಲ್ ಸಾರಥಿ ಸಂಗಮ, ಪ್ರಾಸ್ತಾನಿಕ ಸಂಗಮ, ಇಮಾಂ ಶಾಫಿ (ರ) ಮೌಲೀದ್, ಮೆಹ್ಫಿಲೇ ಇಶ್ಕ್ ಹಾಗೂ ಪೆ.3 ರಂದು ಇತ್ತಿಸಾಲ್ ಕುಟುಂಬ ಸಂಗಮ, ಗಲ್ಫ್ ಸಮ್ಮಿಟ್, ಗೌರವಾರ್ಪಣೆ, ಸನದ್ ದಾನ ಮಹಾ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ರಾಜಕೀಯ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿಯ ಜನರಲ್ ಮೆನೇಜರ್, ಶೈಖುನಾ ಖಾಝಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.