ಡೈಲಿ ವಾರ್ತೆ:01 ಫೆಬ್ರವರಿ 2023

ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)

ಕೇಂದ್ರ ಸರ್ಕಾರದ ಮಹತ್ವಪೂರ್ಣ ಬಜೆಟ್ ಮಂಡನೆ.., ಮೂಲಭೂತ ಸೌಕರ್ಯ ಮಾತ್ರವಲ್ಲದೆ, ಕೆಲವು ವಿಭಾಗಕ್ಕೆ ಕೇಂದ್ರ ಸರ್ಕಾರದ ಸೌಲಭ್ಯ ಕಡೆಗಣನೆ…!” ಬಜೆಟ್ ಮೀಸಲಾತಿಯಲ್ಲಿ ಮೀನಾ ಮೇಷ.., ಏಪ್ರಿಲ್ ನಿಂದ ಬಜೆಟ್ ಮಂಡನ ವಿಚಾರ ಜಾರಿ…!”
“ಮಧ್ಯಮ ವರ್ಗಕ್ಕೆ ಬಿಗ್ ರಿಲೀಫ್, 5ರಿಂದ 7 ಲಕ್ಷದವರೆಗೆ ಟ್ಯಾಕ್ಸ್ ರಹಿತ ಘೋಷಣೆ ..! ಚುನಾವಣಾ ಪೂರ್ವ ಬಜೆಟ್ ಸಾರ್ವಜನಿಕರಲ್ಲಿ ಅಸಮಾಧಾನ…!”

ಬಜೆಟ್ ವಿಶೇಷ ವಿಮರ್ಶಾ ವರದಿ:-

ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳು ಕಾರ್ಯರೂಪಕ್ಕೆ ಬಂದಿರುವುದು , ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಇಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಮಾಡಿದ್ದಾರೆ. ಕೇಂದ್ರದಲ್ಲೂ ಬಿಜೆಪಿ ಸರಕಾರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರೈತರಿಗೆ ಹೊರೆಯಾಗುತ್ತಿರುವ ಟ್ಯಾಕ್ಸ್ ವಿನಾಯತಿಯನ್ನು ಕೊಡಬೇಕು ಎನ್ನುವ ನಿಟ್ಟಿನಲ್ಲಿ ಜನರು ಹೋರಾಟ ನಡೆಸುತ್ತಿದ್ದಾರೆ ಅದಲ್ಲದೆ ಹೆಚ್ಚುವರಿ ಶುಲ್ಕವನ್ನು ವಿವಿಧ ತೆರಿಗೆಗಳ ರೀತಿಯಲ್ಲಿ ನೀಡಿತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಾರಿಯ ಬಜೆಟ್ ಮಂಡನೆಯಲ್ಲಿ ಕೇಂದ್ರ ಸರ್ಕಾರ ತೆರಿಗೆ ರೂಪದಲ್ಲಿ ನೀಡುತ್ತಿರುವಂತಹ ಹಣವನ್ನ ಸರ್ಕಾರ ಯಾವ ರೀತಿ ಬಳಸಬೇಕು ಎಂಬುದನ್ನು ಸರಕಾರ ತಳಮಟ್ಟದಲ್ಲಿ ಯೋಚನೆ ಮಾಡುವ ಹಂತದಲ್ಲಿ ಸಾರ್ವಜನಿಕರು ಗಮನಹರಿಸುವುದರೊಂದಿಗೆ ಕೇಂದ್ರ ಸರ್ಕಾರದ ಬಜೆಟ್ ಯಾವ ರೀತಿ ಏಪ್ರಿಲ್ ನಿಂದ ಜಾರಿಗೆ ಬರಲಿದೆ ಎನ್ನುವುದು ಕಾದು ನೋಡಬೇಕಿದೆ.



10,79,971 ಕೋಟಿ ರೂ. – ಕೇಂದ್ರ ಸರ್ಕಾರದ ಈವರೆಗೆ ಮಾಡಿರುವ ಸಾಲದ ಮೊತ್ತ ಅತ್ಯಂತ ದೊಡ್ಡದಿದೆ. ಹೀಗಾಗಿ, ಈ ಸಾಲಕ್ಕೆ ಕಟ್ಟಬೇಕಾಗಿರುವ ಬಡ್ಡಿಯ ಮೊತ್ತವೇ ಅತಿ ಹೆಚ್ಚಾಗಿದೆ. ಕೇಂದ್ರ ಬಜೆಟ್‌ನಲ್ಲಿ ಬೇರೆ ಎಲ್ಲ ಇಲಾಖೆಗಳಿಗಿಂತಲೂ ಅತಿ ಹೆಚ್ಚು ಹಣವನ್ನು ಸರ್ಕಾರ ಸಾಲದ ಮೇಲಿನ ಬಡ್ಡಿ ಕಟ್ಟೋದಕ್ಕೇ ಬಳಸಬೇಕಿದೆ. ಬರೋಬ್ಬರಿ 10 ಲಕ್ಷ ಕೋಟಿ ರೂ. ಗೂ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ಬಡ್ಡಿ ಕಟ್ಟೋದಕ್ಕೇ ವಿನಿಯೋಗ ಮಾಡಲಿದೆ. ಇನ್ನೊಂದೆಡೆ ಈ ಬಾರಿ 18 ಲಕ್ಷ ಕೋಟಿ ರೂ. ಹೊಸ ಸಾಲ ಮಾಡೋದಕ್ಕೂ ಸರ್ಕಾರ ತೀರ್ಮಾನ ಮಾಡಿದೆ. ತೆರಿಗೆ ಸಂಗ್ರಹದ ಮೂಲಕ ಕೇಂದ್ರ ಸರ್ಕಾರಕ್ಕೆ ಹರಿದು ಬರುವ ಆದಾಯದ ಪೈಕಿ ಸಿಂಹ ಪಾಲು ಸಾಲದ ಮೇಲಿನ ಬಡ್ಡಿಗೇ ಹರಿದು ಹೋಗುತ್ತದೆ.
5,17,034 ಕೋಟಿ ರೂ. – ಇಲಾಖಾವಾರು ಹಣ ಹಂಚಿಕೆಯನ್ನು ಗಮನಿಸಿದಾಗ ಕೇಂದ್ರ ಸರ್ಕಾರವು ಸಾರಿಗೆ ವಿಭಾಗಕ್ಕೆ ಅತಿ ಹೆಚ್ಚು ಹಣ ನೀಡುತ್ತಿದೆ. 5 ಲಕ್ಷ ಕೋಟಿ ರೂ. ಗೂ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ಸಾರಿಗೆಗೆ ಮೀಸಲಿಟ್ಟಿದೆ. ರೈಲು, ರಸ್ತೆ ಸಾರಿಗೆ, ವಿಮಾನ ನಿಲ್ದಾಣ, ಜಲ ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಈ ಹಣ ವಿನಿಯೋಗ ಆಗಲಿದೆ.



4,32,720 ಕೋಟಿ ರೂ. – ರಕ್ಷಣಾ ಇಲಾಖೆಗೆ ಕೇಂದ್ರ ಸರ್ಕಾರ ಪ್ರತಿ ಬಾರಿಯೂ ದೊಡ್ಡ ಮೊತ್ತವನ್ನೇ ಮೀಸಲಿಡುತ್ತದೆ. ಈ ಬಾರಿ ಬಜೆಟ್‌ನಲ್ಲಿ ಕೂಡಾ ಕೇಂದ್ರ ಸರ್ಕಾರ 4 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ರಕ್ಷಣಾ ಇಲಾಖೆಗೆ ಮೀಸಲಿಟ್ಟಿದೆ. ರಕ್ಷಣಾ ಸಿಬ್ಬಂದಿಯ ವೇತನ, ಖರ್ಚು ವೆಚ್ಚಗಳು, ಹೊಸ ಶಸ್ತ್ರಾಸ್ತ್ರ ಹಾಗೂ ವಾಹನ ಖರೀದಿ ಸೇರಿದಂತೆ ಹಲವು ವಿಚಾರಗಳಿಗೆ ಈ ಹಣ ವಿನಿಯೋಗ ಆಗಲಿದೆ.

3,24,641 ಕೋಟಿ ರೂ. – ಕೇಂದ್ರ ಸರ್ಕಾರವು ತಾನು ಸಂಗ್ರಹ ಮಾಡುವ ತೆರಿಗೆಯ ಪೈಕಿ ರಾಜ್ಯಕ್ಕೂ ಪಾಲು ಕೊಡಬೇಕು. ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ತನ್ನ ತೆರಿಗೆ ಆದಾಯದಲ್ಲಿ ಪಾಲು ಕೊಡಬೇಕಿದೆ. ಹೀಗಾಗಿ, 3 ಲಕ್ಷ ಕೋಟಿ ರೂ. ಗೂ ಹೆಚ್ಚಿನ ಹಣವನ್ನು ರಾಜ್ಯಗಳಿಗೆ ನೀಡಲು ಕೇಂದ್ರ ಸರ್ಕಾರವು ಮಿಸಲಿಟ್ಟಿದೆ.
2,38,204 ಕೋಟಿ ರೂ. – ಕೇಂದ್ರ ಸರ್ಕಾರದ ಆದ್ಯತಾ ವಲಯಗಳಲ್ಲಿ ಗ್ರಾಮೀಣಾಭಿವೃದ್ದಿ ಕೂಡಾ ಒಂದು. ಭಾರತ ದೇಶದ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಪ್ರತಿ ಬಜೆಟ್‌ನಲ್ಲೂ ದೊಡ್ಡ ಮೊತ್ತವನ್ನೇ ಮೀಸಲಿಡುತ್ತದೆ. ಈ ಬಾರಿಯ ಬಜೆಟ್‌ನಲ್ಲೂ 2 ಲಕ್ಷ ಕೋಟಿ ರೂ. ಗೂ ಹೆಚ್ಚು ಹಣವನ್ನು ಗ್ರಾಮೀಣಾಭಿವೃದ್ಧಿಗೆ ಮೀಸಲಿಟ್ಟಿದೆ.

2,34,359 ಕೋಟಿ ರೂ. – ಕೇಂದ್ರ ಸರ್ಕಾರಿ ನೌಕರರ ಪಿಂಚಣಿಗಾಗಿಯೇ ಸರ್ಕಾರ 2 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದೆ. ಪ್ರತಿ ಬಾರಿ ಬಜೆಟ್‌ನಲ್ಲೂ ಪೆನ್ಶನ್‌ಗಾಗಿ ಕೇಂದ್ರ ಸರ್ಕಾರ ದೊಡ್ಡ ಮೊತ್ತ ಎತ್ತಿಡಬೇಕಿದೆ
ಪಾರ್ಲಿಮೆಂಟ್ನಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಇದು ಅವರ ಐದನೇ ಮತ್ತು ಈ ಸರ್ಕಾರದ ಅವಧಿಯ ಕೊನೆಯ ಪೂರ್ಣ ಬಜೆಟ್ಆಗಿದೆ.ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ. ಇದರ ಜೊತೆಗೆ ಮಧ್ಯಮ ವರ್ಗಕ್ಕೆ ಬಂಪರ್ ನ್ಯೂಸ್ ನೀಡಿದೆ. 5 ರಿಂದ 7 ಲಕ್ಷದವರೆಗೆ ಯಾವುದೇ ಟ್ಯಾಕ್ಸ್ ಇಲ್ಲ ಎಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.



5-7 ಲಕ್ಷಕ್ಕೆ ಟ್ಯಾಕ್ಸ್ ಇಲ್ಲ..!
7 ಲಕ್ಷ ರೂ ಆದಾಯದರೆಗೂ ತೆರಿಗೆ ವಿನಾಯಿತಿಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ನಿರೀಕ್ಷೆಯಂತೆ ಮಧ್ಯಮ ವರ್ಗದರವಿಗೆ ಹೆಚ್ಚಿನ ತೆರಿಗೆ ಘೋಷಿಸಿದ ನಿರಾಳವಾಗುವಂತೆ ಮಾಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯಡಿ 7 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟುವ ಅಗತ್ಯವಿರೋಲ್ಲ.
ವರ್ಷಕ್ಕೆ ₹ 3 ಲಕ್ಷದವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ₹ 6ರಿಂದ 9 ಲಕ್ಷದವರೆಗೆ ಶೇ 10. ₹ 12ರಿಂದ 15 ಲಕ್ಷಕ್ಕೆ ಶೇ 15. ₹ 15 ಲಕ್ಷಕ್ಕೂ ಹೆಚ್ಚು ಇದ್ದರೆ ಶೇ 30ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. 15 ಲಕ್ಷ ರೂ. ಆದಾಯಕ್ಕಿಂತೆ ಹೆಚ್ಚಿಗೆ ಇರೋರಿಗೆ ಹೊಸ ತೆರಿಗೆ ಪದ್ಧತಿಯಂತೆ ಶೇ.15ರಷ್ಟು ತೆರಿಗೆ ಕಟ್ಟಬೇಕಾಗಿದ್ದು, 3 ಲಕ್ಷ ರೂಪಾಯಿ ಆದಾಯ ಇರೋರು ತೆರಿಗೆ ಕಟ್ಟುವ ಅಗತ್ಯವಿಲ್ಲ.

7 ಲಕ್ಷದವರೆಗೂ ತೆರಿಗೆ ಮಿತಿ ಇದೆ.
*₹ 0-3 ಲಕ್ಷ ಯಾವುದೇ ತೆರಿಗೆ ಇಲ್ಲ
*₹ 3-6 ಲಕ್ಷ 5 %
*₹ 6-9 ಲಕ್ಷ 10 %
*₹ 9-12 ಲಕ್ಷ 15 %
*₹ 12-15 ಲಕ್ಷ 20 %
*₹ 15 ಲಕ್ಷಕ್ಕಿಂತ ಹೆಚ್ಚು 30 %

ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ಮಹತ್ವದ ಕ್ರಮಗಳನ್ನು ವಿಶೇಷವಾಗಿ ನೋಡುವುದಾದರೆ;

1) ₹ 7 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿ.
2) ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್ ಸ್ಲ್ಯಾಬ್ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದೆ.
3) ₹ 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ₹ 52,500 ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಸಿಗಲಿದೆ.
4) ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ
5) ನಿವೃತ್ತರಾದಾಗ ಸಿಗುವ ರಜೆ ನಗದೀಕರಣ ಸೌಲಭ್ಯದ ಮೇಲೆ ಈವರೆಗೆ ₹ 3 ಲಕ್ಷಕ್ಕೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು ₹ 25 ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಸಂಸದರು!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಬಜೆಟ್‌ ನಲ್ಲಿ ವಿನಾಯಿತಿ ಘೋಷಣೆ ಮಾಡುತ್ತಿದ್ದಂತೆ ಸರ್ಕಾರದ ಪರ ಸಚಿವರು, ಸಂಸದರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೊದಲು
5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಸಿಕ್ಕಿತ್ತು. ಕೇಂದ್ರ ಸರ್ಕಾರದ ಬಜೆಟ್ ಮಂಡನೆ ವಿಚಾರದಲ್ಲಿ ಜನರು ಯಾವ ರೀತಿ ಅದರ ಬಗ್ಗೆ ಸ್ಪಂದನೆಯನ್ನು ನೀಡುತ್ತಾರೆ ಮತ್ತು ಸರ್ಕಾರಕ್ಕೆ ಮತ್ತು ಜನರು ನಡುವಿನ ಸಾಮರಸ್ಯವನ್ನು ಮತ್ತು ಈ ಬಾರಿಯ ರಹಿತ ಬಜೆಟ್ ಘೋಷಿಸಲು ಸರ್ಕಾರ ಮುಂದಾಗಿದೆ. ಇಷ್ಟು ದಿನ ಬೇರೆ ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಟ್ಯಾಕ್ಸ್ ನ ವಿನಿಮಯಗಳ ಹೆಚ್ಚಾಗಿದ್ದರು ಸರ್ಕಾರದ ಬಗ್ಗೆ ಬಡ ಜನರು ಇಡೀ ಶಾಪ ಹಾಕುತ್ತಿದ್ದಾರೆ. ಆದರೆ ಈ ಬಾರಿಯ ಬಜೆಟ್ ಯಾವ ರೀತಿ ಸರ್ಕಾರದ ಬಗ್ಗೆ ಗಮನ ಹರಿಸಬೇಕೆನ್ನುವುದೆ ಜನರ ನಡುವಿನ ವಿಚಾರಗಳನ್ನು ತಿಳಿಯುವಂತಹ ನಿಟ್ಟಿನಲ್ಲಿ ಜನರು ಅದರ ಬಗ್ಗೆ ಮುತುವರ್ಜಿಯನ್ನು ವಹಿಸಬೇಕಾಗಿದೆ. ಅದಲ್ಲದೆ ಸರ್ಕಾರ ಮಟ್ಟದಲ್ಲಿ ನಡೆಯುವಂತಹ ಎಲ್ಲಾ ಯೋಜನೆಗಳು ನೇರವಾಗಿ ಜನರಿಗೆ ತಲುಪುವಂತಹ ಉದ್ದೇಶದಿಂದ ಇದು ನಿರ್ವಹಿಸುತ್ತದೆ.

ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)

ಒಟ್ಟಾರೆಯಾಗಿ ಪಂಚ ಸೂತ್ರಗಳನ್ನು ಜನರಿಗೆ ನೀಡುವುದರ ಮೂಲಕ ತೆರಿಗೆ ವಿಚಾರದಲ್ಲಿ ನಿರ್ಮಲ ಸೀತಾರಾಮ್ ವಿಶೇಷ ಬಜೆಟ್ ನಿರ್ಣಯ ಮಾಡಿ ಸಾರ್ವಜನಿಕರಿಗೆ ಯಾವ ರೀತಿಯ ಟ್ಯಾಕ್ಸ್ ಕಡಿಮೆ ಮಾಡುವ ವಿಚಾರದಲ್ಲಿ ಮುಂದೊಂದು ದಿನ ಸಾರ್ವಜನಿಕರ ಅಭಿಪ್ರಾಯ ಯಾವ ರೀತಿ ವ್ಯಕ್ತವಾಗಲಿದೆ ಎಂದು ಕಾದು ನೋಡಬೇಕಿದೆ.