ಡೈಲಿ ವಾರ್ತೆ:06 ಫೆಬ್ರವರಿ 2023
ದಕ್ಷಿಣ ಕನ್ನಡ ದಿಂದ ಪವಿತ್ರಾ ಮಕ್ಕಾಗೆ ಕಾಲ್ನಡಿಗೆಯಿಂದ ಹೊರಟ ಉಪ್ಪಿನಂಗಡಿ ಪೆರಿಯಡ್ಕ ಯುವಕ ನೌಶಾದ್!
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೆರಿಯಡಕದ ನೌಷಾದ್ B K S (25) ವರ್ಷದ ಯುವಕ ಕಾಲ್ನಡಿಗೆಯಲ್ಲಿ ಅಪಘಾನಿಸ್ತಾನ, ಇರಾನ್ ಇರಾಕ್ , ಸೌದಿ ಅರೇಬಿಯಾ ಮಾರ್ಗವಾಗಿ ಒಟ್ಟು 6168 ಕಿ.ಮೀ.ದೂರ ಪಾದಯಾತ್ರೆ ಮೂಲಕ 18 ತಿಂಗಳ ಈ ಯಾತ್ರೆಯನ್ನು ಕ್ರಮಿಸಿ 2024 ನೇ ವರ್ಷದ ಪವಿತ್ರ ಹಜ್ಜ್ ಯಾತ್ರಗೆ ತಲುಪಲು ಹೊರಟಿದ್ದಾರೆ.
ಇವರು ಎರಡು ವರ್ಷದಿಂದ ಕಂಡ (ಹಜ್, ಉಮ್ರಾ) ಕನಸಿನ ಯಾತ್ರೆಯನ್ನು ಕಳೆದ ತಿಂಗಳು ಜ. 30 ರಂದು ಉಪ್ಪಿನಂಗಡಿಯ ತಮ್ಮ ಮನೆಯಿಂದ ಹೊರಟು ಇಂದು ಕೋಟ ಜಾಮಿಯಾ ಮಸೀದಿಗೆ ತಲುಪಿದರು.
ಕೋಟ ಜಾಮಿಯಾ ಮಜೀದ್ ಖತೀಬ್ ಮೂಮೀನ್ ಅಷ್ಪಾಕ್ ನಾಗೂರು ಹಾಗೂ ಕಾರ್ಯದರ್ಶಿ ಬಶೀರ್ ಕೆ. ಇವರು ನೌಶಾದ್ ಅವರನ್ನು ಸ್ವಾಗತಿಸಿಕೊಂಡರು.ಅಲ್ಲದೆ ಜಮಾತ್ ವತಿಯಿಂದ ನೌಶಾದ್ ರವರನ್ನು ಅಭಿನಂದಿಸಿದರು.
ಈ ಸಂದರ್ಭ ಕಳೆದ ವರ್ಷ ಕೇರಳದಿಂದ ಕಾಲ್ನಡಿಗೆಯಲ್ಲಿ ಹೊರಟ ಶಿಹಾಬ್ ಚೋಟೂರು ರವರು ಇಂದು ಪಾಕಿಸ್ತಾನ ತಲುಪಿದ್ದನ್ನು ಸ್ಮರಿಸಲಾಯಿತು.
ಜಮಾತ್ ಬಾಂಧವರಾದ ಅಬ್ದುಲ್ ಶುಕೂರ್, ಅಬ್ದುಲ್ ಗನಿ ಸಾಹೇಬ್, ಮೊಹಮ್ಮದ್ ಝಿಹಾಬ್ ಮೊದಲಾದವರು ಉಪಸ್ಥಿತರಿದ್ದರು.