ಡೈಲಿ ವಾರ್ತೆ:13 ಫೆಬ್ರವರಿ 2023
ಮಲ್ಪೆ: ಮೀನುಗಾರರ ಬಲೆಗೆ ಬಿತ್ತು ಬರೋಬ್ಬರಿ 200 ಕೆ.ಜಿ. ತೂಕದ ದೈತ್ಯ ಮೀನು.!
ಉಡುಪಿ : ಮಲ್ಪೆ ಬಂದರಿನಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ದೈತ್ಯ ಗಾತ್ರದ ಮೀನು ಸಿಕ್ಕಿದೆ. ಈ ಮೀನು ಬರೋಬ್ಬರಿ 200 ಕೆ.ಜಿ.ತೂಕ ಹೊಂದಿದೆ.
ಶಾಂಭವಿ ಹೆಸರಿನ ಬೋಟ್ ನ ಮೀನುಗಾರರ ಬಲೆಗೆ ಈ ಮೀನು ಬಿದ್ದಿದ್ದು, ಇದನ್ನು ಸ್ಥಳೀಯವಾಗಿ ಕಟ್ಟೆ ಕೊಂಬು ಮೀನು ಎಂದು ಕರೆಯುತ್ತಾರೆ. ಈ ಜಾತಿಯ ಸಣ್ಣ ಮೀನಿಗೆ ಇರುವಷ್ಟು ಡಿಮ್ಯಾಂಡ್ ದೊಡ್ಡ ಮೀನಿಗೆ ಇಲ್ಲ.
ಈ ದೈತ್ಯ ಗಾತ್ರ ಮೀನನ್ನು ಕ್ರೇನ್ ಮೂಲಕ ವಿಲೇವಾರಿ ಮಾಡಲಾಗಿದ್ದು, ಬಂದರಿನಲ್ಲಿ ಸೇರಿದ್ದ ಮತ್ಸ್ಯ ಪ್ರಿಯರ ಗಮನ ಸೆಳೆಯಿತು. ಈ ಮೀನಿಗೆ ಕೆಜಿಗೆ ಸುಮಾರು 250 ರೂ. ನಷ್ಟು ದರ ಇದೆ ಎನ್ನುತ್ತಾರೆ ಸ್ಥಳೀಯರು.