ಡೈಲಿ ವಾರ್ತೆ:14 ಫೆಬ್ರವರಿ 2023

ನ್ಯಾಯಾಲಯಕ್ಕೆ ಹಾಜರಾಗದೆ 2 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಬಂಟ್ವಾಳ: ಬಂಟ್ವಾಳದಲ್ಲಿ ವಾರೆಂಟ್ ಜಾರಿಯಾಗಿ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಆರೋಪಿಯಾದ ಮಿತ್ತ ಪಡ್ಪು ಮನೆ ಸಜಿಪನಡು ಗ್ರಾಮದ ಅಫ್ರೀದಿ ಎಂಬಾತ ಬಂಟ್ವಾಳ ಗ್ರಾಮಾಂತರ ಠಾಣೆಯಿಂದ ವಾರೆಂಟ್ ಜಾರಿಯಾಗಿ ಸುಮಾರು 2 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೂ ಹಾಜರಾಗದೆ ತಲೆ ಮರೆಸಿಕೊಂಡಿದ್ದ.

ಆರೋಪಿ ಅಫ್ರೀದಿನನ್ನು ಇಂದು ಬೆಳಿಗ್ಗೆ ದಸ್ತಗಿರಿ ಮಾಡಲಾಗಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.