ಡೈಲಿ ವಾರ್ತೆ:15 ಫೆಬ್ರವರಿ 2023

ಫೆ.25 ರಂದು ಹಾಲಕ್ಕಿ ಯುವ ಜಾಗೃತ ಸಂಘ ಕೆಕ್ಕಾರ ವತಿಯಿಂದ ” ಹಾಲಕ್ಕಿ ಜಾನಪದ ಉತ್ಸವ “

ಹೊನ್ನಾವರ: ತಾಲೂಕಿನ ಕೆಕ್ಕಾರ ಹಾಲಕ್ಕಿ ಯುವ ಜಾಗೃತ ಸಂಘ ಇವರ ಆಶ್ರಯದಲ್ಲಿ ದಿನಾಂಕ 25 ರಂದು ಶನಿವಾರ ಸಂಜೆ 7:30 ಕ್ಕೆ ಹಾಲಕ್ಕಿ ಜಾನಪದ ಉತ್ಸವ ಎಂಬ ವಿನೂತನ ಸ್ಪರ್ಧಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವು ಹೊನ್ನಾವರ, ಕುಮಟಾ ತಾಲೂಕಿನ ಪುರುಷರಿಗಾಗಿ ಕೋಲಾಟ ಸ್ಪರ್ಧೆ, ಮಹಿಳೆರಿಗಾಗಿ ಜಾನಪದ ನೃತ್ಯ ಸ್ಪರ್ಧೆಯನ್ನು ಇಟ್ಟುಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9480677554, 7760440055, 9741124044 ಈ ನಂಬರ್ ನ್ನು ಸಂಪರ್ಕಿಸಬಹುದು.