



ಡೈಲಿ ವಾರ್ತೆ:16 ಫೆಬ್ರವರಿ 2023


ಕಡಲಬ್ಬರ ಸಾಧ್ಯತೆ : ಮೀನುಗಾರರು ಮತ್ತು ಕಿನಾರೆಯ ಜನರಿಗೆ ಎಚ್ಚರಿಕೆ
ಮಂಗಳೂರು: ಕೇಂದ್ರ ಸಮುದ್ರ ಸ್ಥಿತಿ ಅಧ್ಯಯನ ಸಂಶೋಧನಾ ಕೇಂದ್ರ ಫೆ. 15 ರಿಂದ ಫೆ.16ರ ರಾತ್ರಿ 8.30 ರವರೆಗೆ ಕಡಲಬ್ಬರ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಮೀನುಗಾರರು ಮತ್ತು ಕಿನಾರೆಯ ಜನರು ಎಚ್ಚರಿಕೆ ವಹಿಸಬೇಕು. ಕರ್ನಾಟಕ, ಕೇರಳ, ಲಕ್ಷದೀಪ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಸಮುದ್ರದಲ್ಲಿ ಕಡಲು ಅಬ್ಬರದಿಂದ ಕೂಡಿರುವ ಸಾಧ್ಯತೆ ಇದೆ ಎಂದು ಹೇಳಿದೆ.
ಈ ಅವಧಿಯಲ್ಲಿ ಕಡಲಿನಲ್ಲಿ ಭಾರಿ ಗಾತ್ರದ ಅಲೆಗಳು ಉಂಟಾಗುವ ಸಾಧ್ಯತೆ ಇದೆ. ಕೇರಳ ಕಿನಾರೆಯಲ್ಲಿ ಎರಡು ಮೀಟರ್ ವರೆಗೆ ಮತ್ತು ಕರ್ನಾಟಕ ಕಿನಾರೆಯಲ್ಲಿ 1.8 ಮೀಟರ್ ಎತ್ತರದವರೆಗಿನ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ವೇಳೆ ಕಡಲ ಕೊರೆತ ಮತ್ತು ಸಮುದ್ರ ಅಬ್ಬರದಿಂದ ಅನಾಹುತವಾಗುವ ಸಾಧ್ಯತೆಯಿದ್ದು ಸಮುದ್ರ ಕಿನಾರೆಯಲ್ಲಿ ವಾಸಿಸುವ ಮನೆಯವರು ಕರಾವಳಿಯಿಂದ ತಾತ್ಕಾಲಿಕ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿನಂತಿಸಿದೆ.