ಡೈಲಿ ವಾರ್ತೆ:16 ಫೆಬ್ರವರಿ 2023

ಕೋಟ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಶಿವರಾತ್ರಿ ಉತ್ಸವ

ಕೋಟ: ಶ್ರೀ ಮಹಾಲಿಂಗೇಶ್ವರ ಹೇರಂಬ ಮಹಾಗಣಪತಿ ದೇವಸ್ಥಾನ ಮಣೂರು ಇಲ್ಲಿ ಫೆ. 18 ಶನಿವಾರದಂದು ಮಹಾಶಿವರಾತ್ರಿ ಪ್ರಯುಕ್ತ ಬೆಳಗ್ಗೆ 9.30 ರಿಂದ 12.30 ರ ತನಕ ಸಾರ್ವಜನಿಕ ಶತರುದ್ರಾಭಿಷೇಕ ಸಂಜೆ 6.00 ರಿಂದ ಸೇವಾಕರ್ತರಾದ ಸ್ಮಿತಾ ವಾಸುದೇವ ಪೈ ಮತ್ತು ಮಕ್ಕಳು ಇವರಿಂದ ರಂಗಪೂಜೆ ಸಂಜೆ 7.00 ರಿಂದ 8.00ರ ತನಕ ಸೇವಾಕರ್ತರಾದ ಪದ್ಮಾವತಿ ಅಚ್ಯುತ ಹಂದೆ ಮತ್ತು ಮನೆಯವರಿಂದ ಅಗಲು ರಂಗಪೂಜೆ , ಬೆಳಗ್ಗೆ 10.00 ರಿಂದ 12.00 ತನಕ ಭಜನೆ, ಭಜನೆ ಶ್ರೀ ರಾಮ ಮಹಿಳಾ ಭಜನಾ ಮಂಡಳಿ, ಮಣೂರು ಇವರಿಂದ ಸಂಜೆ 5.00 ರಿಂದ 7.00 ತನಕ ಈ ದೇವತಾ ಕಾರ್ಯಕ್ಕೆ ಭಕ್ತಾಧಿಗಳು ಆಗಮಿಸಿ, ಪ್ರಸಾದ ಸ್ವೀಕರಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ತಂತ್ರಿಗಳು, ಅರ್ಚಕರು, ಸಿಬ್ಬಂದಿವರ್ಗ ಮತ್ತು ಜೀರ್ಣೋದ್ಧಾರ ಸಮಿತಿ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಚ್. ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.