ಡೈಲಿ ವಾರ್ತೆ:16 ಫೆಬ್ರವರಿ 2023


ವರದಿ: ವಿದ್ಯಾಧರ ಮೊರಬಾ

ಬೆಳಂಬಾರ ಗ್ರಾಮ ಪಂಚಾಯತ್‍ನಲ್ಲಿ
ಬಳಕೆಯಾಗದ ಪರಿಶಿಷ್ಟ ಅನುದಾನ ಸರ್ಕಾರ ವಾಪಸ್ ಪಡೆಯಲಿ: ಎನ್.ಕೆ. ಮಡಿವಾಳ

ಅಂಕೋಲಾ : ಬೆಳಂಬಾರ ಗ್ರಾಪಂ.ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಇಲ್ಲದಿದ್ದರೂ 2015 ರಿಂದ 2023ರ ತನಕ ಮೀಸಲಾಗಿಟ್ಟ 14ನೇ ಮತ್ತು 15ನೇ ಹಣಕಾಸು ಯೋಜನೆ ಸೇರಿ ದಂತೆ ಒಟ್ಟು 43.76ಲಕ್ಷ ರೂ. ಅನುದಾನ ಪಂಚಾಯಿತ ಬ್ಯಾಂಕ್ ಖಾತೆಯಲಿರುವುದರಿಂದ ಇನ್ನುಳಿದ ಅನುದಾನ ಬರಲು ವಿಳಂಬವಾಗುತ್ತಿದೆ. ಇದನ್ನು ಸರ್ಕಾರ ವಾಪಸ್ ಪಡೆದು ಅದೇ ಮೊತ್ತದ ಅನುದಾನ ವನ್ನು ಬೇರೆ ಹೆಡ್‍ನಲ್ಲಿ ಬಿಡುಗಡೆ ಮಾಡಬೇಕು ಎಂದು ಅಧ್ಯಕ್ಷ ನಾರಾಯಣ ಮಡಿವಾಳ ಹೇಳಿದರು.

ಪಟ್ಟಣದ ಖಾಸಗಿ ಹೊಟೇಲ್‍ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಗ್ರಾಪಂ.ಸದಸ್ಯ ಮಂಜುನಾಥ ಕೆ.ನಾಯ್ಕ ಮಾತನಾಡಿ, ನಮ್ಮ ಪಂಚಾಯಿತ ಅಭಿವೃದ್ಧಿ ಮಾಡುವ ಕನಸು ಪ್ರತಿಯೊಬ್ಬ ಸದಸ್ಯರದಾಗಿದೆ. ಕಸವಿಲೇವಾರಿ ಘಟಕವಿಲ್ಲದೇ ಓರ್ವ ದಾನಿಗಳು ನೀಡಿದ 2 ಗುಂಟೆ ಸ್ಥಳ ದಲ್ಲಿ ಕಸವಿಲೇವಾರಿ
ಘಟಕ ಮಾಡಲು ಸಿದ್ದರಿದ್ದೇವೆ. ಆದರೆ ಅಲ್ಲಿ ಹೋಗಲು ಅರಣ್ಯ
ಇಲಾಖೆಯವರು ರಸ್ತೆಗೆ ಅವಕಾಶ ನೀಡುತ್ತಿಲ್ಲ. ಈ ರಸ್ತೆ
ನಿರ್ಮಾಣಗೊಂಡಲ್ಲಿ ಹಾಲಕ್ಕಿ ಸಮಾಜದ ಸ್ಮಶಾನಕ್ಕೆ ತೆರಳು ಅನುಕೂಲವಾಗುತ್ತದೆ.

ಗ್ರಾ ಪಂ.ಗಳಲ್ಲಿ ದಿನಗೂಲಿ ನೌಕರರನ್ನು ಖಾಯಂಗೊಳಿಸಲು ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿರುವುದು ಸರಿಯಲ್ಲಾ ಎಂದರು. ಸದಸ್ಯೆ ಬೇಬಿ ವಿ. ಗೌಡ ಮಾತನಾಡಿ, 2018ರಲ್ಲಿ ನಮ್ಮ ಪಂಚಾಯತ್‍ಗೆ 20 ಮನೆ ಮಂಜೂರಾಗಿದ್ದವು. ಆದರೆ ಕೆಲವು ತೊಂದರೆಗಳಿಂದ ಮತ್ತು ಸರ್ಕಾರದಿಂದ ಹಣ ಬರುವುದು ವಿಳಂಬ ಆಗಿರುವುದರಿಂದ ಕೆಲವರು ಮನೆಯನ್ನು ಅರ್ಧಮರ್ಧ ಮುಗಿಸಿಕೊಂಡಿದ್ದು, ಕೇವಲ 10 ಜನರಿಗೆ
ಮಾತ್ರ ಬಿಲ್ ಪಾವತಿ ಯಾಗಿದೆ. ಇನ್ನುಳಿದ 10 ಜನರಿಗೆ ಮನೆ ನಿರ್ಮಾಣದ ಕುರಿತು 3 ಹಂತದ ಛಾಯ ಚಿತ್ರಗಳನ್ನು ಪುನಃ ನೀಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಧಿಕಾರಿಗಳು ಈ ವಿಚಾರವಾಗಿ ಸ್ಪಂದಿಸಬೇಕು ಎಂದರು.


ಈ ಸಂದರ್ಭದಲ್ಲಿ ಗ್ರಾ. ಪಂ.ಉಪಾಧ್ಯಕ್ಷೆ ನಾಗವೇಣಿ ವಿ.ಗೌಡ, ಸದಸ್ಯರಾದ ವೆಂಕಟೇಶ ಬಿ.ಗೌಡ, ಜಗದೀಶ ಖಾರ್ವಿ, ಅಜೇತ ಗೌಡ, ಬುದ್ದು ಸಿ. ಗೌಡ, ವಿಜಯಕಲಾ ತಳಕೇರಿ, ಜ್ಯೋತಿ ಖಾರ್ವಿ ಉಪಸ್ಥಿತರಿದ್ದರು.