ಡೈಲಿ ವಾರ್ತೆ:20 ಫೆಬ್ರವರಿ 2023

ನಾರಾವಿ: ಬೈಕ್ ಹಾಗೂ ಪಿಕಪ್ ವಾಹನ ನಡುವೆ ಭೀಕರ ರಸ್ತೆ ಅಪಘಾತ , ವಿದ್ಯಾರ್ಥಿ ಸಾವು!


ಬೆಳ್ತಂಗಡಿ: ನಾರಾವಿ ಬಳಿಯ ಕೊಕ್ರಾಡಿಯಲ್ಲಿ ನಡೆದ ಬೈಕ್ ಮತ್ತು ಕೋಳಿ ಸಾಗಿಸುತ್ತಿದ್ದ ಪಿಕಪ್ ವಾಹನದ ನಡುವೆ ಬೆಳಗಿನಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳಗಿನಜಾವ ಕೋಳಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಕಾರಣ ಮೂಡುಬಿದ್ರೆ ಕಾಲೇಜಿನ ವಿದ್ಯಾರ್ಥಿಯು ಸ್ಥಳದಲ್ಲೇ ಮೃತಪಟ್ಟ ಘಟನೆಯು ನಾರವಿಯ ಕೊಕ್ರಾಡಿಯಲ್ಲಿ ನಡೆದಿದೆ.

ಮೃತ ವ್ಯಕ್ತಿ ಉಜ್ವಲ್ ಎಂದು ತಿಳಿದುಬಂದಿದೆ. ವಯಸ್ಸು 19 ವರ್ಷ, ಮೂಡುಬಿದ್ರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಉಜ್ವಲ್ ಅವರು ಬೆಳಗ್ಗೆ ಮನೆಯಿಂದ ಕಾಲೇಜಿಗೆ ಹೊರಡುವ ಸಮಯದಲ್ಲಿ ಈ ಘಟನೆಯು ಸಂಭವಿಸಿದೆ .

ಮೃತ ವ್ಯಕ್ತಿಯು ಕೊಕ್ರಾಡಿಯಲ್ಲಿ ವಾಸಿಸುತ್ತಿದ್ದರು. ಮೃತರ ತಂದೆಯ ಹೆಸರು ಲಾಲ್ ಚಂದ್ರ ಹೆಗ್ಡೆ, ತಾಯಿಯ ಹೆಸರು ಅಂಬುಜಾ, ತಾಯಿಯು ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಜ್ವಲ್ ಅವರಿಗೆ ಒಬ್ಬ ಸಹೋದರ ನವಲ್ ಹೆಗ್ಡೆ ಎಂದು ತಿಳಿದುಬಂದಿದೆ.