ಡೈಲಿ ವಾರ್ತೆ:23 ಫೆಬ್ರವರಿ 2023

ಮಂಗಳೂರು: ಕಾರಿನೊಳಗೆ ಹೊಕ್ಕಿದ ಅಲ್ಯುಮಿನಿಯಂ ಪಟ್ಟಿಗಳು, ಚಾಲಕ ಪವಾಡ ಸದೃಶ ಪಾರು

ಮಂಗಳೂರು: ಪಿಕಪ್‌ ವಾಹನದಲ್ಲಿ ಸಾಗಿಸುತ್ತಿದ್ದ ಅಲ್ಯುಮಿನಿಯಂ ಪಟ್ಟಿಗಳು ಕಾರಿನ ಒಳಗೆ ಹೊಕ್ಕು ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ನಗರದ ನಂತೂರು ಜಂಕ್ಷನ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಕೆಪಿಟಿ ಕಡೆಯಿಂದ ಪಂಪ್‌ವೆಲ್‌ ಕಡೆಗೆ ಹೋಗುತ್ತಿದ್ದ ಕಾರಿನ ಹಿಂಭಾಗದಲ್ಲಿ ಅಲ್ಯುಮಿನಿಯಂ ಪಟ್ಟಿಗಳನ್ನು ಹೊತ್ತಿದ್ದ ಪಿಕಪ್‌ ಇತ್ತು. ನಂತೂರು ಜಂಕ್ಷನ್‌ನಲ್ಲಿ ಕಾರು ಚಾಲಕ ಬ್ರೇಕ್‌ ಹಾಕಿದಾಗ ಪಿಕ್‌ಅಪ್‌ನಲ್ಲಿದ್ದ ಪಟ್ಟಿಗಳು ಕಾರಿನ ಹಿಂಭಾಗದಿಂದ ಒಳಗೆ ಹೊಕ್ಕಿವೆ. ಕಾರಿನಲ್ಲಿ ಚಾಲಕ ಮಾತ್ರವಿದ್ದರು. ಪಟ್ಟಿಗಳು ಹಿಂಭಾಗದ ಸೀಟುಗಳನ್ನು ದಾಟಿ ಬಂದು ಚಾಲಕನ ಸೀಟಿಗೆ ತಾಗಿ ನಿಂತಿವೆ. ಕಾರಿಗೆ ಹಾನಿಯಾಗಿದೆ. ಪಿಕ್‌ಅಪ್‌ ವಾಹನದ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.