ಡೈಲಿ ವಾರ್ತೆ:30 ಮಾರ್ಚ್ 2023

ದಕ್ಷಿಣ ಕನ್ನಡ: ಬೈಕ್ ನಲ್ಲಿ ತೆರಳುತ್ತಿದ್ದ ಜೋಡಿಯನ್ನು ತಡೆದು ಸುಲಿಗೆ ಮಾಡಿದ ಮೂವರ ಬಂಧನ

ಮಂಗಳೂರು: ಬೈಕ್ ನಲ್ಲಿ ತೆರಳುತ್ತಿದ್ದ ಯುವಕ- ಯುವತಿಯನ್ನು ತಡೆದು ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಸ್ತಿಪಡ್ಪು ನಿವಾಸಿ ಝಾಕೀರ್ ಹುಸೇನ್‌ (27), ಸೋಮೇಶ್ವರ ನಿವಾಸಿ ಉಬೈದುಲ್ಲ(33), ಮೇಲಂಗಡಿ ನಿವಾಸಿ ಖಲೀಲ್(22) ಬಂಧಿತ ಆರೋಪಿಗಳು.
ಕಳೆದ ಸೋಮವಾರ ಬೆಳಗ್ಗೆ ಯುವಕ ಮತ್ತು ಯುವತಿ
ಉಚ್ಚಿಲ ಪರಿಸರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮೂವರ ತಂಡ ಅವರನ್ನು ತಡೆದು ಯುವತಿಯ ಕೈಯಲ್ಲಿದ್ದ ಐ-ಫೋನ್, ಬೈಕ್ ದೋಚಿ ಪರಾರಿಯಾಗಿದ್ದರು. ಈ ಕುರಿತು ಬೈಕ್ ಸವಾರ ಅಬ್ದುಲ್ಲ ಎಂಬವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ 2 ಸ್ಕೂಟರ್ ಗಳು,ಸುಲಿಗೆ ನಡೆಸಿದ್ದ ಐಫೋನ್ ಮತ್ತು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.