ಡೈಲಿ ವಾರ್ತೆ:29 ಮಾರ್ಚ್ 2023

ಬಂಟ್ವಾಳ:ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಂದ 40.16 ರೂ. ಕೋಟಿ ಅನುದಾನದ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ: ಪುರಸಭಾ ವ್ಯಾಪ್ತಿಗೆ ಹೆಚ್ಚಿನ ಅನುದಾನಗಳ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೇನೆ, ಕುಡಿಯುವ ನೀರು ಹಾಗೂ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ರೂ.40.16 ಕೋಟಿ ಅನುದಾನದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಪುರಸಭೆ ಮತ್ತು ಕುಡಿಯುವ ನೀರು ಇಲಾಖೆ ಮಧ್ಯೆ ಸಾಕಷ್ಟು ಗೊಂದಲಗಳು ಮೂಡಿತ್ತು. ಮಾಹಿತಿ ಕೊರತೆಯಿಂದ ಯೋಜನೆಗೆ ತೊಂದರೆಯಾಗಿತ್ತು. ಜಿಲ್ಲೆಯಲ್ಲಿ ಏಕೈಕವಾಗಿ ಬಂಟ್ವಾಳಕ್ಕೆ ಯೋಜನೆ ಮಂಜೂರಾಗಿದೆ ಎಂದರು.


ಯೋಜನೆ ಸಮಗ್ರವಾಗಿ ನಡೆದರೆ ತಾಲೂಕಿನ ಜನತೆಗೆ ಕುಡಿಯುವ ನೀರಿನ ತೊಂದರೆಯಾಗುವುದಿಲ್ಲ. ಶೀಘ್ರವಾಗಿ ಉತ್ತಮ ರೀತಿಯಲ್ಲಿ 56.54 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭವಾಗುತ್ತದೆ.

ಉಳ್ಳಾಲ ಶಾಸಕರ ಮನವಿಯಂತೆ ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ಸಭೆ ನಡೆದು ತಾತ್ಕಾಲಿಕ ಪರಿಹಾರ ನಡೆಸಲಾಗಿತ್ತು. ಬಳಿಕ ಸಮಸ್ಯೆಯನ್ನು ನಿವಾರಿಸಲು ಅದರ ನಿರ್ವಹಣೆಯ ಜವಾಬ್ದಾರಿಯನ್ನು ನಾನು ಹೊತ್ತು, ಹಸಿ ಕಸವನ್ನು ನನ್ನ ಮನೆಗೆ ತೆಗೆದುಕೊಂಡು ಹೋಗಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಂಡಿದ್ದೇನೆ. ಕಸದ ಸಮಸ್ಯೆ ಪರಿಹಾರಕ್ಕೆ ಬಯೋ ಗ್ಯಾಸ್ ನಿರ್ಮಾಣ ಮಾಡುತ್ತಿದ್ದೇನೆ ಎಂದವರು ತಿಳಿಸಿದರು.

ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ , ಇಂಜಿನಿಯರ್ ಶೋಭಾಲಕ್ಷ್ಮಿ ಮಾತನಾಡಿದರು.


ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು, ಹರಿಪ್ರದಾಸ್ ಭಂಡಾರಿಬೆಟ್ಟು, ವಿದ್ಯಾವತಿ ಪ್ರಮೋದ್, ರೇಖಾ ಪೈ, ರಾಮಕೃಷ್ಣ ಆಳ್ವ, ಇದ್ರಿಸ್ ಪಿ.ಜೆ, ಹಸೈನಾರ್ ಶಾಂತಿ ಅಂಗಡಿ, ರಾಮಕೃಷ್ಣ ಆಳ್ವ, ಗಂಗಾಧರ ಪೂಜಾರಿ, ಅಬೂಬಕ್ಕರ್ ಸಿದ್ದೀಕ್, ಝೀನತ್ ಪಿರೋಝ್, ಮೀನಾಕ್ಷಿ ಜೆ.ಗೌಡ, ದೇವಕಿ ಪೂಜಾರಿ, ಶಶಿಕಲಾ ಬಿ, ಶೋಭಾ ಹರಿಶ್ಚಂದ್ರ, ಜಯಂತಿ, ಚೈತನ್ಯ ಗಣೇಶ್ ದಾಸ್, ನಾಮನಿರ್ದೇಶನ ಸದಸ್ಯರಾದ ಲಕ್ಷಣ್ ರಾಜ್, ಚಂದ್ರಶೇಖರ, ಹರೀಶ್ ಕುಲಾಲ್, ಹೂವಯ್ಯ ಮಂಡಾಡಿ, ಪ್ರಮುಖ ರಾದ ದೇವಪ್ಪ ಪೂಜಾರಿ, ಸುಗುಣ ಕಿಣಿ, ಪ್ರಕಾಶ್ ಅಂಚನ್, ಸುದರ್ಶನ್ ಜೈನ್, ರಮನಾಥ ರಾಯಿ, ಜನಾರ್ದನ ಬೊಂಡಾಲ, ಸುರೇಶ್ ಕುಲಾಲ್, ರಾಮದಾಸ್ ಬಂಟ್ವಾಳ, ಭಾಸ್ಕರ ಟೈಲರ್, ಪ್ರಮೋದ್ ಕುಮಾರ್, ಸತೀಶ್ ಶೆಟ್ಟಿ ಮೊಡಂಕಾಪು, ನಾರಾಯಣ ಟೈಲರ್ ಭಂಡಾರಿಬೆಟ್ಟು, ಮಚ್ಚೇಂದ್ರ ಸಾಲ್ಯಾನ್, ದಿನೇಶ್ ಶೆಟ್ಟಿ ದಂಬೆದಾರ್, ಪ್ರಮೋದ್ ಕುಮಾರ್, ವಿಶ್ವನಾಥ್ ಚಂಡ್ತಿಮಾರ್,
ಶರ್ಮಿತ್ ಜೈನ್, ಸುರೇಶ್ ಕೋಟ್ಯಾನ್, ವಸಂತ ಭಂಡಾರಿ, ಪುಷ್ಪರಾಜ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸ್ವಾಗತಿಸಿ, ವಂದಿಸಿದರು.