ಡೈಲಿ ವಾರ್ತೆ:21 ಆಗಸ್ಟ್ 2023

– ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಪತ್ರಕರ್ತರು. (ಅಂಕಣಕಾರರು & ಮಾಧ್ಯಮ ವಿಶ್ಲೇಷಕರು)
email: [email protected]

ಭೂಲೋಕದ ಒಡೆಯನಿಗೆ ‘ನಾಗರ ಪಂಚಮಿಯ ಸಂಭ್ರಮ…,!’ ಜಗದೊಡೆಯನಿಗೆ ಸರ್ಪದ ಯಜ್ಞ ವನ್ನು ನಿಲ್ಲಿಸಿದ ದಿನವೇ ನಾಗರ ಪಂಚಮಿ ಆಚರಣೆ….!” ಹಣ್ಣು -ಹಾಲು- ಹೂ ವಾಸುಕಿ ಸುಬ್ರಹ್ಮಣ್ಯನಿಗೆ ಪ್ರಿಯವಾದ ಸಂಪತ್ತು….!” ನಾಡಿಗೆ ದೊಡ್ಡದು ನಾಗರ ಪಂಚಮಿ…!”

“ನಾಗರಪಂಚಮಿಯ ತನ್ನಿಮಿತ ವಿಶೇಷ ಲೇಖನ…”
ನಾಗರ ಪಂಚಮಿ ನಾಡಿಗೆ ದೊಡ್ಡದು, ಬಹುತೇಕವಾಗಿ ಕಣ್ಣಿಗೆ ಕಾಣುವ ಮತ್ತು ನಾಗರಾಜನ ಮಹಿಮೆ ಈ ಭೂಲೋಕದಲ್ಲಿ ಸೃಷ್ಟಿಗಿಂತಲೂ ಮಿಗಿಲಾಗಿ , ಎನ್ನುವಲ್ಲಿ ಎರಡು ಮಾತಿಲ್ಲ. ಸತ್ಯ ಧರ್ಮ, ನ್ಯಾಯ, ನೀತಿ ಎಲ್ಲವನ್ನು ಪ್ರತಿಷ್ಠಾಪಿಸಿಕೊಂಡಿರುವ ಸುಬ್ರಹ್ಮಣ್ಯ ಜಗದ ಮೇಲೆ ಸಂಚರಿಸುವ ವಿಶಿಷ್ಟ ಪ್ರಾಕೃತಿಕ ದೇವತೆಗಳಲ್ಲಿ ನಾಗದೇವತೆ ಪ್ರಧಾನ ಹಾಗೂ ಭಕ್ತಿಯ ಸಂಗೀತವಾಗಿ ನಡೆಸಲ್ಪಡುತ್ತದೆ. ಅದಲ್ಲದೆ ,ಜಗತ್ತಿನ ವಿವಿಧ ಭೂಮಂಡಲಗಳಲ್ಲಿ ಏಳು ತಡೆಯ ಸರ್ಪ ಹಾಗೂ ಜಗತ್ತಿನ ಪ್ರಾಕೃತಿಕವಾದಂತಹ ದೇವತೆಗಳಲ್ಲಿ ಅಷ್ಟು ಶಕ್ತಿಯನ್ನು ಹೊಂದಿರುವ ಆಗ ದೇವತೆ ಪ್ರತಿಯೊಂದು ಕಣ-ಹಾಲು-hu ಚರಿಸುವ ತಾಯಿಯಾಗಿದ್ದಾಳೆ.

ನಾಗರಪಂಚಮಿಯ ವಿಶೇಷ:
ಒಂದು ಊರಲ್ಲಿ ನಾಲ್ಕು ಜನ ಅಣ್ಣಂದಿರಿಗೆ ಒಬ್ಬಳು ತಂಗಿ ಇದ್ದಳು. ಮನೆಯವರೆಲ್ಲಾ ಒಟ್ಟಿಗೆ ಸೇರಿ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು.

ಆ ಸಂದರ್ಭದಲ್ಲಿ ಅಲ್ಲಿಗೆ ನಾಗರಹಾವೊಂದು ಅಲ್ಲಿಗೆ ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ಪಡೆದುಕೊಂಡಿತು. ಇದರಿಂದಾಗಿ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ದುಃಖವನ್ನು ತಡೆಯಲಾರದೆ ಆ ನಾಗರಹಾವಿನಲ್ಲಿ ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟು ಬೇಡಿಕೊಂಡಳು.
ತಂಗಿಯ ಬೇಡಿಕೆಯಂತೆ ಆ ನಾಗರ ಹಾವು ನಾಲ್ಕು ಜನ ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಬದುಕಿಸಿತ್ತು.
ಅದರ ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಸರ್ಪಯಜ್ಞ ನಿಲ್ಲಿಸಿದ ದಿನವು ನಾಗರ ಪಂಚಮಿ:
ಜನಮೇಜಯ ರಾಜನು ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೇಕಾರಣ ಎಂದು ತಿಳಿದು ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಆ ಸಂದರ್ಭ ಸರ್ಪಗಳ ಬಂಧು ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡು ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡಾಗ ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿ ಆಯಿತು.

ನಾಗರಪಂಚಮಿ – ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ. ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ.

ಈ ದಿನ ಶೇಷನಾಗ ಹಾಗೂ ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು – ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ.’
ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.ಈ ದಿನ ಎಲ್ಲಾ ಸ್ತ್ರೀ ಪುರುಷರೂ ಅಭ್ಯಂಜನ ಸ್ನಾನ ಮಾಡಿ ಹಿಂದಿನ ದಿನ ಪೂಜಿಸಿದ ನಾಗದೇವರನ್ನೇ ಹರಿವಾಯುಗಳ ಪೂಜೆಯ ನಂತರ ಕ್ಷೀರಾಭಿಷೇಕದಿಂದ ಪೂಜಿಸಬೇಕು. ಪೂಜೆಯ ಈ ಫಲವನ್ನು ಶೇಷಾಂತರ್ಗತ ಸಂಕರ್ಷಣನಿಗೆ ಅರ್ಪಿಸಬೇಕು.ಸರ್ಪಗಳು ಮೊದಲು ತುಂಬಾ ದುಷ್ಟತರವಾಗಿದ್ದು ಜನರಿಗೆ ಪೀಡೆಯನ್ನುಂಟು ಮಾಡುತ್ತಿದ್ದವು. ದೇವತೆಗಳು ಇದನ್ನರಿತು ಬ್ರಹ್ಮನ ಬಳಿ ವಿನಂತಿಸಿದರು. ಬ್ರಹ್ಮನು ಸರ್ಪಗಳು ತಮ್ಮ ತಾಯಿ ಕದ್ರುವಿನ ಶಾಪದಿಂದಲೇ ವಿನಾಶ ಹೊಂದುವವೆಂದು ಸೂಚಿಸಿದನು. ಎಲ್ಲಾ ಸರ್ಪಗಳು ಒಟ್ಟುಗೂಡಿ ಬ್ರಹ್ಮನಿಗೆ ಶಾಪನ್ನು ಹಿಂತೆಗೆದುಕೊಳ್ಳಬೇಕೆಂದು ಪ್ರಾರ್ಥಿಸಿದವು. ಅವರ ಅಪರಾಧೀ ಪ್ರಜ್ಞೆ ಪಶ್ಚಾತ್ತಾಪಗಳನ್ನು ಮನಗಂಡು ಬ್ರಹ್ಮನು ಮುಂದೆ ಆಸ್ತಿಕನೆಂಬುವನು ಸರ್ಪಕುಲ ರಕ್ಷಕನಾಗಿ ನಿಲ್ಲುತ್ತಾನೆ ಎಂದು ನುಡಿದನು. ಹಾಗೆ ಹೇಳುತ್ತಾ ಸರ್ಪಗಳು ಅತಲ, ವಿತಲ, ಪಾತಾಲಗಳಲ್ಲಿ ವಾಸಿಸಬೇಕೆಂದು, ನೋಯದೇ ಕಚ್ಚಬಾರದೆಂದೂ ಆದೇಶಿಸಿದನು.

ಭೂಮಂಡಲದ ಜಗತ್ತಿನಲ್ಲಿ ನಾಗದೇವರಿಗೆ ಇರುವಂತಹ ಪ್ರಾಮುಖ್ಯತೆ ಮತ್ತು ಪ್ರತಿಷ್ಠೆಯನ್ನ ಪಂಚಮಿ ಎಂದು ಕರೆಯುತ್ತೇವೆ ಪಂಚಮಿ ಎಂದರೆ ಐದು ವರ್ಣಗಳು ಜಗತ್ತಿನ ಮೂಲೆ ಮೂಲೆ ದಿಕ್ಕುಗಳಿಂದ ಆವೃತವಾಗಿರುವಂತಹ ಪ್ರಮುಖ ಘಟ್ಟವನ್ನು ಪಂಚಮಿ ಎನ್ನುತ್ತೇವೆ. ಇಂತಹ ನಾಗರ ಪಂಚಮಿ ಗ್ರಾಮೀಣ ಭಾಗದಲ್ಲದೆ ಪಟ್ಟಣ ಪ್ರದೇಶದಲ್ಲೂ ವಿಶೇಷವಾಗಿ ಆಚರಿಸುವುದರ ಮೂಲಕ ಇದಕ್ಕೆ ಪ್ರಾಮುಖ್ಯತೆಯನ್ನು ನೀಡಲು ಸಿದ್ಧತೆಯನ್ನ ಮಾಡಿಕೊಂಡಿರುತ್ತಾರೆ. ನಾಡಿಗೆ ಬಹುದೊಡ್ಡ ಪಂಚಮಿ ಆದಂತಹ ನಾಗರ ಪಂಚಮಿ ಶ್ರಾವಣ ಮಾಸವನ್ನು ವಿಶೇಷ ರೀತಿಯಲ್ಲಿ ಕಾಪಾಡುವಂತಹ ಶಕ್ತಿಯನ್ನು ಹೊಂದಿದೆ. ಶ್ರಾವಣ ಮಾಸದಲ್ಲಿ ಬರುವಂತಹ ನಾಗರಪಂಚಮಿ ಪ್ರಪ್ರಥಮವಾದಂತ ಹಬ್ಬಗಳನ್ನು ಸ್ವಾಗತ ಮಾಡುವಂತಹ ಅವಶ್ಯಕತೆಯನ್ನ ಪ್ರಪಂಚಕ್ಕೆ ಸಾರುತ್ತದೆ. ನಗರ ಪಂಚಮಿ ನಾಡಿಗೆ ದೊಡ್ಡದು. ಭೂಲೋಕದ ವಡೆಯನಿಗೆ ಹಾಲಾಭಿಷೇಕ, ತನು-ಮನವನ್ನ ಅರ್ಪಿಸುವುದರ ಮೂಲಕ ವಾಸುಕಿ ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗುತ್ತಾರೆ ಇದುವೇ ನಾಗರಪಂಚಮಿಯ ವಿಶೇಷ.