ಡೈಲಿ ವಾರ್ತೆ: 01/NOV/2023
ಸರ್ವ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ ನನ್ನ ಅವಧಿಯಲ್ಲಿ ಅತೀ ಹೆಚ್ಚು ಅನುದಾನ ನೀಡಿದ ಹೆಮ್ಮೆಯಿದೆ., ಮಾಜಿ ಸಚಿವ ರಮಾನಾಥ ರೈ.
ಬಂಟ್ವಾಳ : ನಾನು ಶಾಸಕ, ಸಚಿವನಾಗಿದ್ದ ಸಂದರ್ಭದಲ್ಲಿ ಜಾತಿ ಮತದ ಬೇಧಭಾವ ಮಾಡದೇ ಎಲ್ಲಾ ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಮಸೀದಿ, ಚರ್ಚುಗಳಿಗೆ ಸಮಾನವಾಗಿ ಅನುದಾನ ಹಂಚುವ ಮೂಲಕ ರಸ್ತೆ, ತಡೆಗೋಡೆ, ಹೈಮಾಸ್ಕ್ ದೀಪಗಳನ್ನು ನೀಡಿದ್ದೇನೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಸುರಿಬೈಲು ಅಶ್ ಅರಿಯ್ಯ ಸಂಸ್ಥೆಯ ಬಳಿ 13 ಲಕ್ಷ ರೂ ವೆಚ್ಚದ ನೂತನ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲೇ ಅತೀ ಹೆಚ್ಚು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅನುದಾನ ವಿನಿಯೋಗಿಸಿದ ಹೆಮ್ಮೆ ನನಗಿದೆ ಎಂದರು.
ಈ ಸಂದರ್ಭದಲ್ಲಿ ಅನುದಾನ ಒದಗಿಸಿದ ಬಿ.ರಮನಾಥ ರೈ ಹಾಗೂ ಸಹಕರಿಸಿದ ಎಂ.ಎಸ್.ಮಹಮ್ಮದ್, ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರನ್ನು ಅಶ್ ಅರಿಯ್ಯ ಸಂಸ್ಥೆಯ ವತಿಯಿಂದ ಸಂಸ್ಥೆಯ ಮೆನೇಜರ್ ಮುಹಮ್ಮದಾಲಿ ಸಖಾಫಿ ಸನ್ಮಾನಿಸಿದರು.
ಉದ್ಯಮಿ ಸಿಂಗಾರಿ ಹಾಜಿ ಎನ್.ಸುಲೈಮಾನ್, ಮಂಚಿ ಗ್ರಾಮ ಪಂಚಾಯತ್ ಅದ್ಯಕ್ಷ ಜಿ.ಎಮ್.ಇಬ್ರಾಹಿಂ, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಸುರಿಬೈಲ್, ಪ್ರಮುಖರಾದ ಖಾದರ್ ಕೆ.ಪಿ.ಬೈಲ್, ಯಾಕೂಬ್ ನಾರ್ಶ ಮೊದಲಾದವರು ಉಪಸ್ಥಿತರಿದ್ದರು.