ಡೈಲಿ ವಾರ್ತೆ: 05/NOV/2023

ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.

ಕರಾವಳಿಯ ಗಂಡು ಕಲೆಗೆ ಅವಮಾನ – ಮಕ್ಕಳ ಯಕ್ಷಗಾನವನ್ನು ಅರ್ಧದಲ್ಲೇ ಮಟಕುಗೊಳಿಸಿದ ಹೇರಿಕುದ್ರು ಶ್ರೀ ಮಹಾಂಕಾಳಿ ದೇವಸ್ಥಾನದ ಅರ್ಚಕ

ವಿಡಿಯೋ ವೀಕ್ಷಿಸಿ

ಕುಂದಾಪುರ: ಕರಾವಳಿ ಯಕ್ಷಗಾನ ತನ್ನದೇ ಆದಂತಹ ಬಿಂಬತೆಯನ್ನ ಸೃಷ್ಟಿಸುವ ಕಲೆಯಾಗಿ ರಾಜ್ಯ ಹಾಗೂ ಪರ ರಾಜ್ಯಗಳಲ್ಲಿಯೂ ಯಕ್ಷಗಾನ ಪ್ರದರ್ಶನ ತನ್ನನ್ನು ತಾನು ಮೀರಿಸುವಷ್ಟು ನಡೆಯುತ್ತದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಲೆಯಾಗಿ ಹೊರ ಸೂಸುವ ಯಕ್ಷಗಾನ ಕಲೆ ಪ್ರತಿಯೊಬ್ಬರ ಮನೆ ಮತ್ತು ಮನದಲ್ಲಿ ಸಾಂಕೇತಿಕವಾಗಿ ನೆಲೆಗೊಂಡಿದೆ ಪರಿಸರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನದೇ ಆದ ಬಿಂಬಿತವನ್ನು ಕೊಂಡುಕೊಳ್ಳುವ ಯಕ್ಷಗಾನ ಮಂಡಳಿಗಳು ರಾತ್ರಿ ಕಾಲಿಗೆ ಗೆಜ್ಜೆಯನ್ನ ಕಟ್ಟಿ ದೇವರ ಸ್ತುತಿಯೊಂದಿಗೆ ಪ್ರಾರಂಭಿಸುವ ಯಕ್ಷಗಾನಗಳು ಮನುಷ್ಯನ ಒಂದು ಅವಿಭಾಜ್ಯ ಅಂಗವಾಗಿ ಕರಾವಳಿ ಭಾಗದಲ್ಲಿ ಸಂಚರಿಸುತ್ತಿದೆ.
ಕರಾವಳಿಯ ಯಕ್ಷಗಾನಕ್ಕೆ ತನ್ನದೇ ಆದಂತಹ ವೈಶಿಷ್ಟ್ಯತೆ ಹಾಗೂ ಧಾರ್ಮಿಕ ದತ್ತವಾದಂತಹ ನಂಬಿಕೆ ಇದೆ. ಅಂತಹ ಕಲೆಯನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ, ಮತ್ತು ಕಷ್ಟ ಬಂದಾಗ ನೆನೆದುಕೊಂಡು ಹರಕೆ ರೂಪದಲ್ಲಿ ಸೇವೆ ಆಟವನ್ನು ಆಡಿಸಿ, ಯಕ್ಷಗಾನದಿಂದ ಮೋಕ್ಷವನ್ನು ಕಂಡವರಿದ್ದಾರೆ. ಅದಲ್ಲದೆ, ಸಾವಿರಾರು ಕಲಾವಿದರು ಬದುಕುವಂತಹ ಕಲೆಯ ಆರಾಧನೆಯ ಸ್ಥಳವಾದಂತ ಈ ಯಕ್ಷಗಾನ ತನ್ನದೇ ಆದಂತಹ ಪಾರಂಪರಿಕವಾದ ಪದ್ಧತಿಯನ್ನು ಹೊಂದಿದೆ. ಇಂತಹ ಕರಾವಳಿಯ ಗಂಡು ಕಲೆಯನ್ನು ಅವಮಾನಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರುನಲ್ಲಿ ನಡೆದಿದೆ.

ಹೇರಿಕುದ್ರು ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಕೇಂದ್ರ ಇವರು ನಡೆಸಲ್ಪಡುತ್ತಿರುವ ಚಿಣ್ಣರ ಮಕ್ಕಳ ಯಕ್ಷಗಾನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿತ್ತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಯಕ್ಷ ಹಬ್ಬ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಯಕ್ಷಗಾನ ಕಾರ್ಯಕ್ರಮಕ್ಕೆ ಪೋಷಕರು ಸೇರಿದಂತೆ ನೂರಾರು ಪ್ರೇಕ್ಷಕರು ಬಂದು ನೆರದಿದ್ದಾರೆ ಯಕ್ಷಗಾನ ಪ್ರದರ್ಶನ ಎಂದಿನಂತೆ ವಿಶೇಷವಾಗಿ ಜರಗುತ್ತಿತ್ತು ಆದರೆ ಈ ಯಕ್ಷಗಾನ ಪ್ರದರ್ಶನಕ್ಕೂ ಕೂಡ ಅಲ್ಲಿನ ವ್ಯಕ್ತಿಯೊಬ್ಬರು ರಾಜಕೀಯ ಕಾರ್ಯಕರ್ತರು ಎನ್ನುವ ಹೆಸರಿನಲ್ಲಿ ಪುಂಡಾಟ ಮೆರೆದಿದ್ದು ನಿಜಕ್ಕೂ ಯಕ್ಷಗಾನ ಕಲೆಗೆ ಮಾಡಿದ ಅವಮಾನವಾಗಿ ಪರಿಣಮಿಸಿದೆ.

ಶ್ರೀ ಮಹಾಂಕಾಳಿ ದೇವಸ್ಥಾನದ ಅರ್ಚಕರಾದಂತಹ ಉದಯ ಪೂಜಾರಿಯವರು ಸ್ಥಳೀಯ ಆರಕ್ಷಕರ ಠಾಣೆಗೆ ದೂರುನ್ನು
ದಾಖಲಿಸಿದರೆ ಆ ದೂರಿನ ಅನ್ವಯ ಆರಕ್ಷಕರು ಸ್ಥಳಕ್ಕೆ ಬಂದು ಯಕ್ಷಗಾನದ ಆಯೋಜಕರಿಗೆ ಮತ್ತು ಸಂಘಟನೆಗೆ ನಮ್ಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ ಕಾರಣಕ್ಕಾಗಿ ನೀವು ಯಕ್ಷಗಾನ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು ಎಂದು ಕೋರಿಕೊಂಡಾಗ ಅದರಂತೆ ಕಾನೂನಿಗೆ ತಲೆ ಬಾಗಿ ಯಕ್ಷಗಾನವನ್ನು ಸ್ಥಗಿತಗೊಳಿಸಲಾಯಿತು.

ಇದರಿಂದ ನೂರಾರು ಪ್ರೇಕ್ಷಕರು, ಮಕ್ಕಳು, ಮಕ್ಕಳ ಪೋಷಕರು ಮನನೊಂದು ಇಂತಹ ಒಂದು ಅಪರಾಧ ಮಾಡಿದಂತಹ ಅರ್ಚಕರ ವಿರುದ್ಧ ಇಡೀ ಶಾಪ ಹಾಕುತ್ತಿದ್ದಾರೆ ಧಾರ್ಮಿಕ ಕಲೆ ಹಾಗೂ ದೈವದತ್ತವಾಗಿ ಬಂದಿರುವ ಯಕ್ಷಗಾನ ಕಲೆಗೆ ಈ ರೀತಿ ಅಡ್ಡಿ ಪಡಿಸುವುದು ಮನುಷ್ಯತ್ವದ ಲಕ್ಷಣವಲ್ಲ ಎನ್ನುವುದು ಸಾರ್ವಜನಿಕರು ಅರ್ಚಕರ ವಿರುದ್ಧ ಕಿಡಿ ಕಾರಿದ್ದಾರೆ.