ಡೈಲಿ ವಾರ್ತೆ: 06/NOV/2023

ರಾಜ್ಯಮಟ್ಟದ ಅಬಾಕಸ್ – 2023 ಸ್ಪರ್ಧೆಯಲ್ಲಿ ಕೋಟ ಎಜ್ಯುಕೇರ್ ಸಂಸ್ಥೆ ವತಿಯಿಂದ ಭಾಗವಹಿಸಿದ ಮಕ್ಕಳಿಗೆ ಬಹುಮಾನದ ಸುರಿಮಳೆ

ಕೋಟ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಫ್ರೈ.ಲಿ ವತಿಯಿಂದ ಹಾಸನದಲ್ಲಿ ನಡೆದ 18ನೇ ರಾಜ್ಯಮಟ್ಟದ ಅಬಾಕಸ್ 2023 ಸ್ಪರ್ಧೆಯಲ್ಲಿ ಕೋಟ ಎಜ್ಯುಕೇರ್ ಸಂಸ್ಥೆ ವತಿಯಿಂದ ಭಾಗವಹಿಸಿದ ಕೋಟ ಪಡುಕರೆ ಸತೀಶ್ ಪೂಜಾರಿ ಹಾಗೂ ಆಶಾ ಇವರ ಪುತ್ರ ಆತೀಷ್.ಎಸ್. ಪೂಜಾರಿ ಪ್ರಥಮ ಸ್ಥಾನ. ರಾಘವೇಂದ್ರ ಕಾಂಚನ್ ಹಾಗೂ ಸುಪ್ರೀತಾ ಮೊಗವೀರ್ ಇವರ ಪುತ್ರ ರಿಷಿ. ಆರ್. ಮೊಗವೀರ್ ದ್ವಿತೀಯ ಸ್ಥಾನ ಕೋಟ ದೀಪಿಕಾ ಆರ್ ಮತ್ತು ಜಿ ಎ ರವಿ ಇವರ ಪುತ್ರ ಆದಿತ್ಯ.ಆರ್. ಕೋಟ ದ್ವಿತೀಯ ಸ್ಥಾನ. ಕಾವಡಿ ಕಲ್ಲುಗದ್ದೆ ವಿಜಯ ಮೊಗವೀರ ಹಾಗೂ ವಿಜಯ .ಎ ಇವರ ಪುತ್ರ ಕೌಸ್ತುಬ್ ದ್ವಿತೀಯಸ್ಥಾನ. ಆವರ್ಸೆ ಪ್ರಶಾಂತ ಮೊಗವೀರ ಹಾಗೂ ರೇಖಾ ಇವರ ಪುತ್ರ ಪ್ರವೀರ್ .ಪಿ ಹಾಗೂ ಪುತ್ರಿ ಮಾನ್ವಿ.ಪಿ ದ್ವಿತೀಯಸ್ಥಾನ. ಹಳ್ನಾಡು ಉದಯ ಮೊಗವೀರ ಹಾಗೂ ರೇಷ್ಮಾ ಇವರ ಪುತ್ರ ಅದ್ವಿಕ್ ದ್ವಿತೀಯ ಸ್ಥಾನ. ಸಾಲಿಗ್ರಾಮ ದೇವೇಂದ್ರ.ಕೆ ಹಾಗೂ ಹೇಮಾ ಇವರ ಪುತ್ರ ಸಮನ್ಯು ಡಿ ಪೂಜಾರಿ ತೃತೀಯ ಸ್ಥಾನ. ಹಂದಟ್ಟು ಭಾಸ್ಕರ್ ಪೂಜಾರಿ ಹಾಗೂ ರಜನಿ ಇವರ ಪುತ್ರ ಹಾರ್ದಿಕ ಬಿಲ್ಲವ ತೃತೀಯ
ಸ್ಥಾನ. ಹಂದಟ್ಟು ಕೋಟ ಪ್ರಕಾಶ್. ಎಚ್ ಹಾಗೂ ಅನಿತಾ. ಕೆ ಇವರ ಪುತ್ರ ಅದ್ವಿತ್. ಪಿ. ಹಂದಟ್ಟು ತೃತೀಯಸ್ಥಾನ ಸಾಲಿಗ್ರಾಮ ರವಿಜಾ ಹಾಗೂ ವಿಜಯ್ ಇವರ ಪುತ್ರಿ ಧನ್ವಿ.ವಿ ಕೊಠಾರಿ ನಾಲ್ಕನೇ ಸ್ಥಾನ, ಬಾರಕೂರು ರಾಘವೇಂದ್ರ ಕೊಠಾರಿ ಹಾಗೂ ಗೀತಾ ಕೊಠಾರಿ ಇವರ ಪುತ್ರ ಅಥರ್ವ ಆರ್ .ಕೊಠಾರಿ ನಾಲ್ಕನೇ ಸ್ಥಾನ. ಬಾಳೆಬೇಟ್ಟು ವಾರಿಜ ಶಿವಾನಂದ ಪೂಜಾರಿ ಇವರ ಪುತ್ರ ಗಹನ್. ಪಿ 5ನೇ ಸ್ಥಾನ ಬೆಟ್ಟಲಕ್ಕಿ ಮಹೇಶ್ ಹಾಗೂ ಉಷಾ ಇವರ ಪುತ್ರ ಕ್ರತೀಶ್ ಯಾನೆ ಮನೀಷ್ 5ನೇಸ್ಥಾನ.ಮಾಲತೇಶ್ ಎಸ್.ಬೆಳಗಳಿ ಹಾಗೂ ನಯನ ಎಮ್ ಬೆಳಗಳಿ ಇವರ ಪುತ್ರ
ಸ್ಕಂಧನ್. ಎಮ್. ಬೆಳಗಳಿ 5ನೇ ಸ್ಥಾನ. ಗುಳ್ಳಾಡಿ ಮಹೇಶ್ ಕುಮಾರ್ ಶೆಟ್ಟಿ ಹಾಗೂ ಪ್ರತೀಮಾ ಎಮ್.ಶೆಟ್ಟಿ ಇವರ ಪುತ್ರ ಪ್ರಥಮ್.ಎಮ್.ಶೆಟ್ಟಿ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ.

ಪ್ರಸನ್ನ ಕೆ ಬಿ ಹಾಗೂ ಸುಪ್ರೀತಾ ಮೊಗವೀರ್ ಇವರು ತರಬೇತುದಾರರಾಗಿದ್ದಾರೆ ಎಂದು ಕೋಟ ಎಜ್ಯುಕೇರ್ ಸಂಸ್ಥೆ ಸ್ಥಾಪಕ ಅಧ್ಯಕ್ಷರಾದ ಚೇತನ ಎಂ ತಿಳಿಸಿರುತ್ತಾರೆ.