



ಡೈಲಿ ವಾರ್ತೆ: 07/NOV/2023


ದಕ್ಷಿಣ ಕನ್ನಡ: 18 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು!
ಉಪ್ಪಿನಂಗಡಿ: ಹೃದಯಾಘಾತದಿಂದ ವಿದ್ಯಾರ್ಥಿಯೊರ್ವ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯ ಕೌಕ್ರಾಡಿಯಲ್ಲಿ ನಡೆದಿದೆ.
ಹೃದಯಘಾತದಿಂದ ಮೃತಪಟ್ಟ ದುರ್ದೈವಿ ಕೌಕ್ರಾಡಿ ನಿವಾಸಿಯಾಗಿರುವ ಶಾಂತಿ ಬೆಟ್ಟು ನಿವಾಸಿ ಯೂಸುಫ್ ಅವರ ಪುತ್ರ ಮಹಮ್ಮದ್ ಇರ್ಫಾನ್ (18) ಎಂದು ತಿಳಿದು ಬಂದಿದೆ.
ಮೃತ ಇರ್ಫಾನ್ ಎ.ಸಿ ಮೆಕ್ಯಾನಿಂಗ್ ವ್ಯಾಸಂಗ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇವರು ತಂದೆ, ತಾಯಿ ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ.