ಡೈಲಿ ವಾರ್ತೆ: 17/Feb/2024

ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ

ಬಂಟ್ವಾಳ : ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿ ನಿರ್ಮಾಣ ಕಾರ್ಯಗಳನ್ನು ವೀಕ್ಷಿಸಿ ದೇವರ ಪ್ರಸಾದ ಸ್ವೀಕರಿಸಿದರು.

ದೇವಾಲಯದ ನಿರ್ಮಾಣ ಕಾರ್ಯ ಅತ್ಯಂತ ಸುಂದರವಾಗಿ ಮೂಡಿಬಂದಿದ್ದು ಇದರ ನೇತ್ರತ್ವ ವಹಿಸಿರುವ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ದೇವಾಲಯದ ಮುಂಭಾಗದಲ್ಲಿ ನಿರ್ಮಾಣಗೊಂಡ ಬಾವಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಬಳಿಕ ದೇವಾಲಯದ ಒಳಗಿನ ವಿನ್ಯಾಸವನ್ನು ವೀಕ್ಷಿಸಿದರು

ಜೀರ್ಣೋದ್ಧಾರ- ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಷಾ ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ರವಿಶಂಕರ್ ಶೆಟ್ಟಿ ಬಡಾಜೆಗುತ್ತು, ಅಶ್ವನಿಕುಮಾರ್ ರೈ, ಪದ್ಮರಾಜ್ ಆರ್, ಇನಾಯಕ್ ಆಲಿ‌ ಮೊದಲಾದ ಪ್ರಮುಖರು ಜತೆಗಿದ್ದರು