ಡೈಲಿ ವಾರ್ತೆ: 10/April/2024

ಕರಾವಳಿಯಾದ್ಯಂತ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

ಕರಾವಳಿ : ಮಂಗಳವಾರ ಶವ್ವಾಲ್ ಚಂದ್ರ ದರ್ಶನದ ನಂತರ ಇಂದು (ಬುಧವಾರ) ಈದ್ ಉಲ್ ಫಿತರ್ ಹಬ್ಬದ ಘೋಷಣೆಯಾಗಿತ್ತು.

ಮುಸ್ಲಿಂ ಬಾಂಧವರು ಉಡುಪಿ, ಉ.ಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ ನಡೆಸಿದರು.
ಈದ್ ನಮಾಝಿನ ನಂತರ ಮಸೀದಿ/ಈದ್ಗಾಗಳಲ್ಲಿ ಖುತ್ಬಾ (ಪ್ರಭಾಷಣ) ನೆರೆವೇರಿತು. ನಂತರ ಹಿರಿಯರು, ಕಿರಿಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.