ಡೈಲಿ ವಾರ್ತೆ: 09/ಮೇ /2024

ಗೆಳೆಯರೊಂದಿಗೆ ಪಾರ್ಟಿ ಮಾಡಿ ಮಲಗಿದ ಯುವಕನ ಭೀಕರ ಹತ್ಯೆ!

ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೊರವಲಯದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆಯು ಗುರುವಾರ ನಡೆದಿದೆ.

ಕೊಲೆಯಾದ ಯುವಕ ಹೈದರ್ ನಗರದ ತಾಂಡಾದ ನಿವಾಸಿ ಸುಭಾಸ ನಾಯಕ್ (23) ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಮುಂಡರಗಿ ಹೊರವಲಯದ ಹೌಸೀಂಗ್ ಬೋರ್ಡ್ ನ ಕಾಲೋನಿಯ ಬಯಲಿನಲ್ಲಿ ಇಬ್ಬರು ಗೆಳೆಯರ ಜೊತೆಗೆ ಕೂಡಿಕೊಂಡು ಪಾರ್ಟಿ ಮಾಡಿದ್ದಾನೆ. ಆದರೆ ಅದೆ ಬಯಲಿನಲ್ಲಿ ತಡರಾತ್ರಿ ಸುಭಾಸ ನಾಯಕನನ್ನು ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿರುವ ಬಗ್ಗೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಸುಭಾಸ ನಾಯಕ ಜೊತೆ ಇದ್ದ ಗೆಳೆಯರು ತಾಂಡಾಕ್ಕೆ ಹೋಗಿ ಹತ್ಯೆಯ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಪೋಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಘಟನೆಯ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.