ಡೈಲಿ ವಾರ್ತೆ: 09/ಮೇ /2024

SSLC ಪರೀಕ್ಷಾ ಫಲಿತಾಂಶ: ಕಾಟಿಪಳ್ಳ ನೂರುಲ್ ಹುದಾ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿನಿ ಫಾತಿಮಾ ಹಿಬಾ ಪ್ರಥಮ

ಕಾಟಿಪಳ್ಳ: ಗುರುವಾರ ಪ್ರಕಟವಾದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕಾಟಿಪಳ್ಳ ನೂರುಲ್ ಹುದಾ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಫಾತಿಮಾ ಹಿಬಾ ರವರು 553 (88.48%) ಅಂಕ ಪಡೆದು ನಮ್ಮ ಊರಿಗೆ ಶಾಲೆಗೆ ಕೀರ್ತಿ ತಂದಿರುತ್ತಾರೆ.

ಇವರು ಹಸನ್ ಬಾವ ಮತ್ತು ಝರೀನಾ ರವರ ಸುಪುತ್ರಿಯಾಗಿರುತ್ತಾರೆ.
ಸುಲ್ತಾನ್ ಫ್ಯಾಮಿಲಿ ಕಾಟಿಪಳ್ಳ ಇವರು ಅಭಿನಂದನೆ ಸಲ್ಲಿಸಿರುತ್ತಾರೆ.