ಡೈಲಿ ವಾರ್ತೆ: 09/ಮೇ /2024

ಮೇ.10 ರಂದು ಶ್ರೀ ಕ್ಷೇತ್ರ ಕಳಿಬೈಲ್ ನಲ್ಲಿ ಗೆಂಡೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಕೆಳಬೆಟ್ಟು ಮೂಡಹಡು ಗ್ರಾಮದ ಶ್ರೀ ಕ್ಷೇತ್ರ ಕಳಿಬೈಲ್ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನದ ಕಳಿಬೈಲ್ ನೇಮೋತ್ಸವ, ಗೆಂಡೋತ್ಸವ ಹಾಗೂ ಮಾರಿಪೂಜೆಯು ಮೇ. 10, 11 ಹಾಗೂ 12 ರಂದು ನಡೆಯಲಿದೆ.

ದಿನಾಂಕ 10/05/2024 ರಂದು ಬೆಳಿಗ್ಗೆ 6 ರಿಂದ ಶ್ರೀ ವೇದ ಮೂರ್ತಿ ನಾಯಿರಬೆಟ್ಟು ಶ್ರೀ ರಮೇಶ್ ಭಟ್ ಇವರ ನೇತೃತ್ವದಲ್ಲಿ ಶ್ರೀ ತುಳಸಿ ಅಮ್ಮನ ಶಿಲಾಮಯ ಬಿಂಬ ಪ್ರತಿಷ್ಠೆ.
“ಧಾರ್ಮಿಕ ಪೂಜಾ ಕಾರ್ಯಕ್ರಮ”
ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ನಂತರ “ಅನ್ನಸಂತರ್ಪಣೆ “

ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಅನ್ನಪೂರ್ಣ ಪಾಕಶಾಲೆ ಉದ್ಘಾಟನೆ ನಡೆಯಲಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶ್ರೀ ಕ್ಷೇತ್ರ ಕಳಿಬೈಲು ಆಡಳಿತ ಮೊಕ್ತೇಸರರಾದ ಶ್ರೀ ಎಂ. ಸಿ. ಚಂದ್ರಶೇಖರ್ ವಹಿಸಲಿದ್ದು.
ನಾಡೋಜ ಡಾ. ಜಿ ಶಂಕರ್ ಅವರು ದ್ವೀಪ ಪ್ರಜ್ವಲನೆ ಮಾಡಲಿದ್ದಾರೆ.
ಪಾಂಡೇಶ್ವರ ಡಾ. ವಿಜಯ ಮಂಜರು ಶುಭ ಆಶೀರ್ವಚನ ಗೈವರು.
ಕೋಟ ಮಣೂರು ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ್ ಸಿ ಕುಂದರ್ ಅವರು ಅನ್ನಪೂರ್ಣ ಪಾಕಶಾಲೆ ಉದ್ಘಾಟನೆ ಮಾಡಲಿದ್ದಾರೆ.

ಶ್ರೀ ಬಿ. ಶಾಂತರಾಮ ಶೆಟ್ಟಿ, ಶ್ರೀ ಜೋರ್ಚ್ ಎಸ್ ಫೆರ್ನಾಂಡಿಸ್, ಶ್ರೀ ಈಶ್ವರ್ ಮಲ್ಪೆ, ಶ್ರೀ ವಾಸುದೇವಾ ಹಂಗಾರಕಟ್ಟೆ, ಅಲ್ವಿನ್ ಅಂದ್ರಾದೆ ಹಾಗೂ ಸುಜಾತಾ ಅಂದ್ರಾದೆ ಈ ಸಾಧಕರನ್ನು ಪುರಸ್ಕರಿಸಲಾಗುವುದು.
ಅಲ್ಲದೆ ಕಂಬಳ ಕ್ಷೇತ್ರದ ತೆಂಕು, ಬಡಗಿನ ಸಾಧನೆಯ ಹೆಸರಾಂತ ಕೋಣ ಬಾರ್ಕೂರು ಕುಟ್ಟಿ ಯನ್ನು ಪುರಸ್ಕರಿಸಲಾಗುವುದೆಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ರಾತ್ರಿ 8:30 ಕ್ಕೆ ಭಕ್ತಿ ಗಾನ ನೃತ್ಯ ವೈಭವ
ರಾತ್ರಿ 9:30 ಕ್ಕೆ ಶಿರಸಿ ಅಮ್ಮನ ದರ್ಶನ ಸೇವೆ “ಗೆಂಡೋತ್ಸವ
ನಡೆಯಲಿದೆ ಎಂದು ಶ್ರೀ ಕಳಿಬೈಲು ಸ್ವಾಮೀ ಕೊರಗಜ್ಜ ಸೇವಾ ಸಮಿತಿ ಪ್ರಧಾನ ಅರ್ಚಕರು ಹಾಗೂ ಸಂಚಾಲಕರಾದ ಶ್ರೀ ಅಭಿಜಿತ್ ಪಾಂಡೇಶ್ವರ ಹಾಗೂ ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮತ್ತು ಶ್ರೀ ಕ್ಷೇತ್ರ ಕಳಿಬೈಲು ಆಡಳಿತ ಮೊಕ್ತೇಸರರು ಶ್ರೀ ಎಂ.ಸಿ. ಚಂದ್ರಶೇಖರ್ ಪ್ರಕಟಿಸಿರುತ್ತಾರೆ.