ಡೈಲಿ ವಾರ್ತೆ: 09/ಮೇ /2024

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಎಸ್ಸೆಸ್ಸೆಲ್ಸಿ ಯಲ್ಲಿ ಶೇಕಡಾ 100 ಫಲಿತಾಂಶ

ಬಂಟ್ವಾಳ : ಶಾಲಾ ಶಿಕ್ಷಣ ಇಲಾಖೆಯು ನಡೆಸಿದ 2023-24 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ‌ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು ಮಾಣಿ, ಪೆರಾಜೆ – ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು   ಶೇಕಡಾ100 ಫಲಿತಾಂಶವನ್ನು  ಪಡೆದುಕೊಂಡಿದೆ.

ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

   ವೃದ್ಧಿ ಎ ಕೊಂಡೆ (605) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಅಶೋಕ್ ಬಿ ಕೊಂಡೆ ಮತ್ತು  ಮಧುರ ದಂಪತಿಗಳ ಪುತ್ರಿ. ಮಾನ್ಯ ಆರ್ ಶೆಟ್ಟಿ (604) ದ್ವಿತೀಯ ಸ್ಥಾನ ಪಡೆದಿದ್ದು ಈಕೆ ರವೀಂದ್ರ ದರ್ಬೆ ಮತ್ತು‌‌ ಹರಿಣಿ ದಂಪತಿಗಳ ಪುತ್ರಿ.
ತೃತೀಯ ಸ್ಥಾನವನ್ನು ಪಡೆದುಕೊಂಡಿರುವ ಪ್ರೇಕ್ಷಾ ಕೆ. (602) ಆನಂದ ಕುಲಾಲ್ ಮತ್ತು‌  ಸುಶೀಲ ಎ ದಂಪತಿಗಳ‌ ಪುತ್ರಿಯಾಗಿರುತ್ತಾಳೆ.