ಡೈಲಿ ವಾರ್ತೆ: 12/ಮೇ /2024
ನೂತನ ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಬಿ ಎಂ ತುಂಬೆ ಆಯ್ಕೆ
ಬಂಟ್ವಾಳ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ನೂತನ ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಬಿ ಮೊಹಮ್ಮದ್ ತುಂಬೆ ಯವರನ್ನು ಕರ್ನಾಟಕ ರಾಜ್ಯ ಸ್ಕೌಟ್ಸ್ ಮುಖ್ಯ ಆಯುಕ್ತ
ಪಿ.ಜಿ ಆರ್ ಸಿಂಧ್ಯಾ ರವರು ಆಯ್ಕೆ ಮಾಡಿರುತ್ತಾರೆ.
ಬಿ ಮೊಹಮ್ಮದ್ ತುಂಬೆಯವರು ಕಳೆದ 40 ವರ್ಷಕ್ಕಿಂತ ಹೆಚ್ಚು ಕಾಲ ಸ್ಕೌಟಿಂಗ್ ನಲ್ಲಿ ಸ್ಕೌಟ್ ಮಾಸ್ಟರ್ ಆಗಿ ಜಿಲ್ಲಾ ಸಂಸ್ಥೆಯಲ್ಲಿ ಜಿಲ್ಲಾ ಸಂಘಟನಾ ಆಯುಕ್ತರಾಗಿ, ಜಿಲ್ಲಾ ತರಬೇತಿ ಆಯುಕ್ತರಾಗಿ ಹಾಗೂ ಬಂಟ್ವಾಳ ಸ್ಥಳೀಯ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ, ಸ್ಕೌಟ್ಸ್ ವಿಭಾಗದಲ್ಲಿ ಎಲ್ ಟಿ ತರಬೇತಿ, ಕ್ಲಬ್ ವಿಭಾಗದಲ್ಲಿ ಎಚ್ ಡಬ್ಲ್ಯೂ ತರಬೇತಿಯನ್ನು ಪಡೆದು, ಸ್ಥಳೀಯ,ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ. ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಇವರು ಜಿಲ್ಲೆಯ ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುತ್ತಾರೆ.