ಡೈಲಿ ವಾರ್ತೆ: 29/ಮೇ /2024

ಕಿಡ್ನಿ ಸ್ಟೋನ್ ಜಾಸ್ತಿಯಾಗುತ್ತಿರುವುದೇಕೆ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.

ಬಿಸಿಲಿನ ದಗೆಗೆ ನೀರು ಎಷ್ಟೇ ಕುಡಿದರೂ ಬೆವರಾಗಿ ಇಳಿಯುತ್ತದೆ ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಇದು ಮೂತ್ರದಲ್ಲಿ ಸೋಂಕು ಹಾಗೂ ಕಿಡ್ನಿ ಸ್ಟೋನ್‌ ಪ್ರಕರಣಗಳು ಹೆಚ್ಚಳವಾಗುವಂತೆ ಮಾಡಿದೆ. ಆಸ್ಪತ್ರೆಗಳಲ್ಲಿ ಎಲ್ಲಾ ಪ್ರಕರಣಕ್ಕಿಂತ ಜಾಸ್ತಿ ಕಿಡ್ನಿ ಸ್ಟೋನ್‌ ಕಂಡುಬರುತ್ತಿದೆ. ವರದಿಗಳು ಹೇಳುವ ಪ್ರಕಾರ ಇಂತಹ ಸಮಸ್ಯೆ ಹಿಂದಿಗಿಂತ ದುಪ್ಪಟ್ಟು ಆಗಿದೆ. ಅದರಲ್ಲಿಯೂ ಪುರುಷರಲ್ಲಿ ಈ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಹಾಗಾದರೆ ಇದಕ್ಕೆ ಕಾರಣವೇನು? ಈ ಬಗ್ಗೆ ವೈದ್ಯರು ಹೇಳುವುದೇನು? ಇಲ್ಲಿದೆ ಮಾಹಿತಿ.

ಈ ಬಾರಿಯ ಬಿಸಿಲು ಜನರನ್ನು ಹೈರಾಣ ಮಾಡಿದೆ ಎಂದರೆ ತಪ್ಪಾಗಲಾರದು. ಇದರಿಂದ ಕಿಡ್ನಿ ಸ್ಟೋನ್ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯರಿಗಿಂತಲೂ ಹೆಚ್ಚಾಗಿ ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಬಿಸಿಲಿ ದಗೆಯಿಂದ ನೀರು ಎಷ್ಟೇ ಕುಡಿದರೂ ಬೆವರಾಗಿ ಇಳಿಯುತ್ತದೆ ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಇದು ಮೂತ್ರದಲ್ಲಿ ಸೋಂಕು ಹಾಗೂ ಕಿಡ್ನಿ ಸ್ಟೋನ್‌ ಪ್ರಕರಣಗಳು ಹೆಚ್ಚಳವಾಗುವಂತೆ ಮಾಡಿದೆ. ಆಸ್ಪತ್ರೆಗಳಲ್ಲಿ ಎಲ್ಲಾ ಪ್ರಕರಣಕ್ಕಿಂತ ಜಾಸ್ತಿ ಕಿಡ್ನಿ ಸ್ಟೋನ್‌ ಕಂಡುಬರುತ್ತಿದೆ. ವರದಿಗಳು ಹೇಳುವ ಪ್ರಕಾರ ಇಂತಹ ಸಮಸ್ಯೆ ಹಿಂದಿಗಿಂತ ದುಪ್ಪಟ್ಟು ಆಗಿದೆ. ಅದರಲ್ಲಿಯೂ ಪುರುಷರಲ್ಲಿ ಈ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಹಾಗಾದರೆ ಇದಕ್ಕೆ ಕಾರಣವೇನು? ಈ ಬಗ್ಗೆ ವೈದ್ಯರು ಹೇಳುವುದೇನು? ಇಲ್ಲಿದೆ ಮಾಹಿತಿ.

ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ ಹೆಚ್ಚುತ್ತಿರುವುದಕ್ಕೆ ಕಾರಣವೇನು?
ತಾಪಮಾನ ಏರಿಕೆಯು ಜನರಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚಿಸಿದೆ. ಹೆಚ್ಚಾಗಿ 20 ರಿಂದ 40 ವರ್ಷದವರಲ್ಲೇ ಕಿಡ್ನಿ ಸ್ಟೋನ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಬೇಸಿಗೆಯಲ್ಲಿ ಈ ರೀತಿ ಪ್ರಕರಣಗಳು ಕಂಡು ಬರಲು ಮುಖ್ಯ ಕಾರಣವೆಂದರೆ ದೇಹದಲ್ಲಿನ ನೀರಿನ ಕೊರತೆ. ಸಾಮಾನ್ಯವಾಗಿ ಮಹಿಳೆಯರಾಗಲಿ ಅಥವಾ ಪುರುಷರಿಗಾಗಲಿ ದೇಹಕ್ಕೆ 2ರಿಂದ 3 ಲೀ. ನೀರು ಅಗತ್ಯ. ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಹೋಗುವುದರಿಂದ ನೀರಿನ ಅಂಶ ಕಡಿಮೆಯಾಗುತ್ತದೆ. ಅದರಲ್ಲಿಯೂ ಬೆವರು ಹೆಚ್ಚಾಗಿ ಹೋಗುವವರು ನೀರನ್ನು ಜಾಸ್ತಿ ಕುಡಿಯಬೇಕು. ಇಲ್ಲವಾದಲ್ಲಿ ಇದು ನೇರವಾಗಿ ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಮಧ್ಯ ವಯಸ್ಕರಲ್ಲಿ ಕ್ಯಾಲ್ಸಿಯಂ ಶೇಖರಣೆಯಿಂದಾಗಿ ಕಿಡ್ನಿ ಸ್ಟೋನ್‌ ಉಂಟಾಗುತ್ತವೆ. ಅದರಲ್ಲಿಯೂ ಇತ್ತೀಚೆಗೆ ಯುವ ಸಮುದಾಯದಲ್ಲಿರುವ ಸ್ಥೂಲಕಾಯತೆ ಜೀವನಶೈಲಿಯಲ್ಲಿ ಏರುಪೇರು ಮುಂತಾದ ಸಮಸ್ಯೆಗಳು ಇದಕ್ಕೆ ಪೂರಕವಾಗಿದೆ. ಅಲ್ಲದೆ ಹೆಚ್ಚಿನ ಪ್ರೋಟೀನ್‌, ಉಪ್ಪು ಮತ್ತು ಸಕ್ಕರೆ ಸೇವನೆ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತದೆ.

ಸಾಮಾನ್ಯ ಅವಧಿಗಿಂತ ಬೇಸಿಗೆಯಲ್ಲಿ ಶೇ.40 ರಷ್ಟು ಪ್ರಕರಣ ಹೆಚ್ಚಾಗಿರುವುದರಿಂದ ಈ ಬಗ್ಗೆ ಎಲ್ಲರೂ ಗಮನ ಕೊಡುವುದು ಉತ್ತಮ. ಹಾಗಾಗಿ ನೀರನ್ನು ಹೆಚ್ಚು ಹೆಚ್ಚು ಕುಡಿಯುವುದರ ಜೊತೆಗೆ ಮೂತ್ರ ವಿಸರ್ಜನೆಯನ್ನು ತಡೆದುಕೊಳ್ಳಬೇಡಿ. ಜತೆಗೆ ದಿನಕ್ಕೆ 2ರಿಂದ 3 ಲೀ.ನಷ್ಟು ನೀರು ಕುಡಿದರೆ ಕಿಡ್ನಿ ಉತ್ತಮವಾಗಿರುತ್ತದೆ. ಯಾವುದೇ ಅಪಾಯವೂ ಇರುವುದಿಲ್ಲ.