


ಡೈಲಿ ವಾರ್ತೆ: 30/ಆಗಸ್ಟ್/ 2025


‘ಶೂನ್ಯ ಅಭಿವೃದ್ಧಿ’ ಡೀಸೆಲ್ ಮ್ಯಾನ್ ಉಡುಪಿ ಶಾಸಕರಿಗೆ ಸಾಧನ ಪ್ರಶಸ್ತಿ – ಕೋಟ ನಾಗೇಂದ್ರ ಪುತ್ರನ್ ಟೀಕೆ

ಉಡುಪಿ: ಉಡುಪಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಇರುವ ಉಡುಪಿ ಶಾಸಕರಿಗೆ ನಮ್ಮ ನೆಚ್ಚಿನ ನಾಯಕರಾದ ರಾಜೇಂದ್ರ ಕುಮಾರ್ ಅವರು ಸಾಧನ ಪ್ರಶಸ್ತಿ ನೀಡಿರುವುದು ವಿಪರ್ಯಾಸ.
ಜನಪ್ರತಿನಿಧಿಗಳಾಗಿ ಹೇಗೆ ಇರಬೇಕೆಂಬ ಸಾಮಾನ್ಯ ಮನೋಜ್ಞಾನ ಇಲ್ಲದವರಿಗೆಲ್ಲ, ಪ್ರಶಸ್ತಿ ಕೊಟ್ಟರೆ ಪ್ರಶಸ್ತಿಯ ಗೌರವಕ್ಕೆ ದಕ್ಕೆ ತಂದಂತೆ ಸರಿ.
ನೂರಾರು ಜನರಿಗೆ ಒಂದು ಪೈಸೆಯೂ ಹಣ ಕೊಡದೆ ಮೋಸ ಮಾಡಿರುವುದೇ ಉಡುಪಿ ಶಾಸಕರ ಸಾಧನೆಯಾಗಿದೆ.
ಫೆಡರೇಷನ್ ನಲ್ಲಿ ಒಂದು ಪರ್ಮಿಟ್ ಗೆ ಒಂದು ತಿಂಗಳಿಗೆ 9000 ಸಾವಿರ ಲೀಟರ್ ಡೀಸೆಲ್ ಇದು ಸರ್ಕಾರದ ಅನುಮೋದನೆಯಾದರೆ.
ಫೆಡರೇಷನ್ ಅಧ್ಯಕ್ಷರು, ಉಡುಪಿ ಶಾಸಕರು ನೂರಾರು ಪರ್ಮಿಟ್ ಬೋಟುಗಳಿಗೆ 50 ಸಾವಿರ ಲೀಟರ್ ಗೂ ಹೆಚ್ಚು ಡಿಸೇಲ್ (ಡೀಲ್)ಮಾಡಿರುವುದು ಉಡುಪಿ ಶಾಸಕರ ಇದು ಸಾಧನೆ.
ರಾಜೇಂದ್ರ ಕುಮಾರ್ ಅವರಂತ ಸಾಧಕರು ಪ್ರಶಸ್ತಿ ಪ್ರಧಾನ ಮಾಡುವಾಗ ಅವರ ಹಿನ್ನೆಲೆ ಗಮನಿಸುವುದು ಉತ್ತಮ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ
ಕೋಟ ನಾಗೇಂದ್ರ ಪುತ್ರನ್
ಟೀಕಿಸಿದ್ದಾರೆ.