ಡೈಲಿ ವಾರ್ತೆ: 03/ಆಗಸ್ಟ್/2024

ಕೋಲಾರ: ಕಾರು ಮರಕ್ಕೆ ಡಿಕ್ಕಿ– ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು, ಓರ್ವ ಪಾರು

ಕೋಲಾರ: ಆಡಿ ಕಾರೊಂದು ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತದಿಂದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಪಾರಾದ ಘಟನೆ ಕೋಲಾರ ಹೊರವಲಯದ ಬಂಗಾರಪೇಟೆ ಮುಖ್ಯರಸ್ತೆ ಸಹಕಾರ ನಗರದಲ್ಲಿ ನಡೆದಿದೆ

ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್ ಹಾಗೂ ಬಂಗಾರಪೇಟೆಯ ನಿಶ್ಚಲ್ ಎಂದು ಗುರುತಿಸಲಾಗಿದೆ.
ಬಂಗಾರಪೇಟೆಯ ಸಾಯಿ ಗಗನ್ ಘಟನೆಯಲ್ಲಿ ಪಾರಾಗಿದ್ದಾನೆ.

ಮೃತರು ಪ್ರಸಿದ್ಧ ಯೂನಿವರ್ಸಿಟಿವೊಂದರ ವಿದ್ಯಾರ್ಥಿಗಳಾಗಿದ್ದು ವಿದ್ಯಾರ್ಥಿಗಳು ಸಾಯಿ ಗಗನ್ ಮನೆಗೆ ಬಂದಿದ್ದರು. ಅಲ್ಲಿಂದ ವಾಪಸ್ ಕೋಲಾರಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.