ಡೈಲಿ ವಾರ್ತೆ: 08/Sep/2024

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (SCI) ಕೋಟ ಲಿಜನ್ ನ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ ಪ್ರೊಫೆಸರ್‌ ಭಾಸ್ಕರ್ ಎಸ್. ಶೆಟ್ಟಿಗೆ ಸನ್ಮಾನ

ಕುಂದಾಪುರ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (SCI) ಕೋಟ ಲಿಜನ್ ನ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ ಪ್ರೊಫೆಸರ್‌ ಭಾಸ್ಕರ್ ಎಸ್ ಶೆಟ್ಟಿ. ಪ್ರಾಂಶುಪಾಲರು, ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರನ್ನು ಕುಂದಾಪುರ ದ ಕಾಳಾವರ ಅವರ ನಿವಾಸದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ SCI ರಾಷ್ಟ್ರೀಯ ಉಪಾಧ್ಯಕ್ಷ ರಾದ ಹುಸೇನ್ ಹೈಕಾಡಿ, ಯವರು ಪ್ರೊಫೆಸರ್ ಭಾಸ್ಕರ್ ಶೆಟ್ಟಿ ಯವರನ್ನು ಸನ್ಮಾನಿಸಿದರು.

SCI ಕೋಟ ಲಿಜನ್ ನ ಅಧ್ಯಕ್ಷ ಕೇಶವ ಆಚಾರ್ ಕೋಟ, ಕಾರ್ಯದರ್ಶಿ ಉಪನ್ಯಾಸಕರಾದ ಚಂದ್ರ ಜಪ್ತಿ, ಖಜಾಂಚಿ ಉಪನ್ಯಾಸಕರಾದ ವಿನಯಚಂದ್ರ ಹಾಗೂ ಉಪಾಧ್ಯಕ್ಷರಾದ ಉಮೇಶ್ ಕೋಟ ಇವರುಗಳು ಉಪಸ್ಥಿತರಿದ್ದರು.