ಡೈಲಿ ವಾರ್ತೆ: 08/Sep/2024

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸ ಮಾ ಪ್ರಾ ಶಾಲೆ ಯಲ್ಲಾಪುರ ಶಾಲೆಯಲ್ಲಿ 21 ದಿನಗಳ ಓದುವ ಅಭಿಯಾನ ಕಾರ್ಯಕ್ರಮ ಅನುಷ್ಠಾನ.

ಇಂದು ಗದಗ ಜಿಲ್ಲೆ, ಲಕ್ಷ್ಮೇಶ್ವರ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲ್ಲಾಪುರದಲ್ಲಿ ಶಿಕ್ಷಣ ಇಲಾಖೆ ಹೊರಟಿಸಿದ ಆದೇಶದನ್ವಯ 21 ದಿನಗಳ ಓದುವ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಇಂದಿನ ಚಟುವಟಿಕೆಯಾದ ರೀಡ್ ಎ ಥಾನ್ ನೆರವೇರಿಸಲಾಯಿತು.

ಶಾಲೆಯ ಶಿಕ್ಷಕ ವೃಂದ ತಮ್ಮ ಎಲ್ಲ ವಿದ್ಯಾರ್ಥಿಗಳನ್ನು ಶಾಲೆಯ ಆವರಣದಲ್ಲಿ ಕುಳಿತುಕೊಂಡು ತಮಗೆ ಇಷ್ಟವಾದ ಕಥೆ, ಚುಟುಕುಗಳು, ಪದ್ಯಗಳು, ವ್ಯಕ್ತಿ ಪರಿಚಯ ಪುಸ್ತಕ, ಪಂಚತಂತ್ರ ಕಥೆಗಳು, ಕಾದಂಬರಿಗಳು ಹೀಗೆ ಹಲವಾರು ವೈವಿಧ್ಯಮಯ ಪುಸ್ತಕಗಳನ್ನು ಓದುವಂತೆ ವ್ಯವಸ್ಥೆ ಗೊಳಿಸಿದ್ದರು. ಸುಮಾರು 30 ನಿಮಿಷಗಳ ನಂತರ ಎಲ್ಲ ವಿದ್ಯಾರ್ಥಿಗಳು ಕ್ರಮಬದ್ಧವಾಗಿ ಒಬ್ಬೊಬ್ಬರಾಗಿ ಬಂದು ತಾವು ಓದಿದ ಪುಸ್ತಕದ ಹೆಸರು ಹಾಗೂ ಅದರ ಮೂಲ ಆಶಯವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಇದರಿಂದ ಅಲ್ಪ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಹಲವು ಪುಸ್ತಕಗಳ ಪರಿಚಯ ಹಾಗೂ ಜ್ಞಾನ ವಿನಿಮಯವಾಯಿತು.

ಈ ಕಾರ್ಯಕ್ರಮ ಕುರಿತು ಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ S M ಮಲ್ಲಣ್ಣವರ‌ ಗುರುಗಳು ಕಾರ್ಯಕ್ರಮದ ಆಶಯವನ್ನು ವ್ಯಕ್ತಪಡಿಸುತ್ತಾ ಮಕ್ಕಳಲ್ಲಿ ಓದುವ ಹವ್ಯಾಸದ ಮಹತ್ವವನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಶ್ರೀ M I ಕಣಿಕೆ. ಶ್ರೀ S M ಸ್ಥಾವರಮಠ. ಶ್ರೀ S N ಮಾಗಳದ. ಶ್ರೀಮತಿ S M ನಾಗರಕಟ್ಟಿ. ಶ್ರೀ S M ಹುಡೇದ. ಶ್ರೀ M Y ಭೋವಿ. ಶ್ರೀ ಸತೀಶ ಸ್ವಾದಿ ಹಾಗೂ ಶ್ರೀ ಗಣೇಶ ಲಮಾಣಿ ಉಪಸ್ಥಿತರಿದ್ದರು.